"ಭಾರತ, ನಾನು ನನ್ನ ಗುರಿ ತಲುಪಿದೆ...": ಇದು ಚಂದ್ರಯಾನ-3 ರಿಂದ ಬಂದ ಮೊದಲ ಸಂದೇಶ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ದೇಶವೇ ಸಂಭ್ರಮಿಸಿದೆ.

"ಭಾರತ, ನಾನು ನನ್ನ ಗುರಿ ತಲುಪಿದೆ...": ಇದು ಚಂದ್ರಯಾನ-3 ರಿಂದ ಬಂದ ಮೊದಲ ಸಂದೇಶ

ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದು, ಅಲ್ಲಿಂದ ಬಂದ ಮೊದಲ ಸಂದೇಶವನ್ನು ಇಸ್ರೋ ಈ ರೀತಿಯಾಗಿ ಹೇಳಿಕೊಂಡಿದೆ.

ಭಾರತ.. ನಾನು ನನ್ನ ಗುರಿಯನ್ನು ತಲುಪಿದೆ ಮತ್ತು ನೀವು ಕೂಡ..' ಎಂದು ಚಂದ್ರಯಾನ-3 ಸಂದೇಶವನ್ನು ರವಾನಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್ನಲ್ಲಿ ಹೇಳಿಕೊಂಡಿದೆ.

ಅತ್ಯಂತ ನಿರೀಕ್ಷೆಯ, ರೋಚಕ ಅನುಭವದ ಚಂದ್ರಯಾನ-3 ಪೂರ್ವ ನಿಗದಿಯಂತೆ ಸರಿಯಾಗಿ 6.03 ನಿಮಿಷಕ್ಕೆ ಸಾಫ್ಟ್ ಲ್ಯಾಂಡ್ ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಲೈವ್ನಲ್ಲಿ ವೀಕ್ಷಣೆ ಮಾಡಿ ಹುರಿದುಂಬಿಸಿದರು.Post a Comment (0)
Previous Post Next Post