ಭಾರತದಲ್ಲಿ ಇಂದು ಬಿಡುಗಡೆಯಾದ ಈ ಇನೋವಾ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡ!

ಭಾರತದಲ್ಲಿ ಇಂದು ಬಿಡುಗಡೆಯಾದ ಈ ಇನೋವಾ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡ! ಹೀಗಾಗಿ ಇದರ ಮಾಲೀಕರು ಪೆಟ್ರೋಲ್‌ ರೇಟ್‌ ಗಗನಕ್ಕೇರಿದರೂ, ಅಥವಾ ಸಿಗದೇ ಹೋದರೂ ನಿಶ್ಚಿಂತೆಯಿಂದ ಇರಬಹುದು.

ಭಾರತದಲ್ಲಿ ಇಂದು ಬಿಡುಗಡೆಯಾದ ಈ ಇನೋವಾ ಕಾರಿಗೆ ಪೆಟ್ರೋಲ್‌, ಡೀಸೆಲ್‌ ಬೇಡ!

ಬಿಎಸ್‌ 6 ಹೈಬ್ರಿಡ್‌ ಎಥೆನಾಲ್‌ ಬಳಸಿ ಚಲಾಯಿಸಬಹುದಾದ ಟೊಯೊಟಾ ಇನೋವಾ ಕಾರನ್ನು ( Toyota Innova HyCross) ಸಾರಿಗೆ ಸಚಿವ ನಿತಿನ್‌ ಗಡ್ಕರಿ ಬಿಡುಗಡೆಗೊಳಿಸಿದ್ದಾರೆ. BS-VI (Stage-II) ಮತ್ತು electrified flex fuel ಕಾರು ಇದಾಗಿದೆ. ಇದು ವಿಶ್ವದ ಮೊಟ್ಟ ಮೊದಲನೆಯ Flex - fuel ethanol powers car ಎಂ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕಬ್ಬು, ಜೋಳ, ಬಾರ್ಲಿಯ ತ್ಯಾಜ್ಯವನ್ನು ಉಪಯೋಗಿಸಿ ತಯಾರಿಸುವ ಎಥೆನಾಲ್‌ ಮೂಲಕ ಈ ಕಾರು ಓಡುತ್ತದೆ. ಪೆಟ್ರೋಲ್-ಡೀಸೆಲ್‌ಗೆ ಹೋಲಿಸಿದರೆ ಇದು ಕಡಿಮೆ ಖರ್ಚಿನಲ್ಲಿ ಸಿಗಲಿದೆ. ಭವಿಷ್ಯದಲ್ಲಿ ಫಾಸಿಲ್‌ ಫ್ಯುಯೆಲ್‌ಗೆ ಇದು ಪರ್ಯಾಯ. ಇದರಿಂದ ಉಂಟಾಗುವ ಪರಿಸರ ಮಾಲಿನ್ಯ ಕೂಡ ಕಡಿಮೆ ಎನ್ನುತ್ತಾರೆ ಬಲ್ಲವರು. ಈಗ ಬಿಡುಗಡೆಯಾಗಿರುವ ಟೊಯೊಟಾ ಇನೋವಾ ಹೈ ಕ್ರಾಸ್‌ ಫ್ಲೆಕ್ಸ್‌ ಫ್ಯುಯೆಲ್‌ ಎಂಪಿವಿ ಕಾರಿನ ವಿಶೇಷತೆ ಏನೆಂದರೆ, ಸ್ವತಃ ಕಾರು ತಾನಾಗಿಯೇ ವಿದ್ಯುತ್‌ ಉತ್ಪಾದಿಸುತ್ತದೆ. ಹೀಗಾಗಿ ಎಲೆಕ್ಟ್ರಿಕ್‌ ಕಾರಿನಂತೆಯೂ ಚಲಾಯಿಸಬಹುದು.

ಪೆಟ್ರೋಲ್-ಡೀಸೆಲ್‌ ಮುಂದೊಂದು ದಿನ ಖಾಲಿಯಾಗಲಿದೆ. ಆಗ ಏನು ಮಾಡುವುದು? ಎಂಬ ಪ್ರಶ್ನೆಗೆ ಸಿಗುವ ಉತ್ತರಗಳಲ್ಲೊಂದು ಎಥೆನಾಲ್‌. ಇದರಿಂದ ರೈತರಿಗೆ ಕೂಡ ಆದಾಯದ ಮೂಲವಾಗಲಿದೆ. ವರದಿಗಳ ಪ್ರಕಾರ ಭಾರತ 2030ರ ವೇಳೆಗೆ ವಿಶ್ವದ ಮೂರನೇ ಅತಿ ದೊಡ್ಡ ಆಟೊಮೊಬೈಲ್‌ ಇಂಡಸ್ಟ್ರಿಯಾಗಲಿದೆ. ಮೋದಿ ಸರ್ಕಾರ ಆಟೊಮೊಬೈಲ್‌ ಉದ್ದಿಮೆಯ ಪ್ರಗತಿಯ ಸಲುವಾಗಿ 25,938 ಕೋಟಿ ರೂ. ಗಳ PLI ಯೋಜನೆಯನ್ನೂ ಜಾರಿಗೊಳಿಸಿದೆ. ಅಂದರೆ ಉತ್ಪಾದನೆ ಆಧರಿತ ಇನ್ಸೆಂಟಿವ್‌ ಸ್ಕೀಮ್.‌ ( Production linked incentive) 

ಭಾರತ ಈಗ ವರ್ಷಕ್ಕೆ 16 ಲಕ್ಷ ಕೋಟಿ ರೂ. ಮೌಲ್ಯದ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಭಾರಿ ಹೊರೆಯಾಗುತ್ತದೆ. ತೈಲ ಆಮದನ್ನು ನಿಲ್ಲಿಸಬೇಕಿದ್ದರೆ ಇಂಥ ಪರ್ಯಾಯ ಅಗತ್ಯ. ತೈಲ ಆಮದು ಕಡಿಮೆಯಾದಷ್ಟೂ ಇಕಾನಮಿಗೆ ಲಾಭ. ಹೀಗಾಗಿ, ಎಥೆನಾಲ್‌ನಿಂದ ಓಡಾಡುವ ಕಾರು ನಮ್ಮೆಲ್ಲರ ಕನಸಾಗಿತ್ತು ಎಂದು ಕೇಂದ್ರ ಸಚಿವ ಹರ್ದೀಪ್‌ ಪುರಿ ಕಾರ್ಯಕ್ರಮದಲ್ಲಿ ಹೇಳಿದ್ರು.

ಭಾರತದಲ್ಲಿ ಕಳೆದ 2022-23ರಲ್ಲಿ 17,47,376 ಕಾರುಗಳು ಮಾರಾಟವಾಗಿವೆ. ಅಂದರೆ ದಿನಕ್ಕೆ ಸರಾಸರಿ 4,787 ಕಾರುಗಳು ಗ್ರಾಹಕರ ಪಾಲಾಗಿದೆ. ಇನ್ನು ಇತರ ವಾಹನಗಳದ್ದು ಬೇರೆ ಲೆಕ್ಕ. ಇಷ್ಟು ದೊಡ್ಡ ಮಾರುಕಟ್ಟೆ ಭಾರತದಲ್ಲಿದೆ. ಇದು ಇನ್ನೂ ಬೆಳೆಯುವುದು ಖಚಿತ. ಮಧ್ಯಮ ವರ್ಗದ ಆದಾಯ ಇರುವವರ ಸಂಖ್ಯೆ ಹೆಚ್ಚುತ್ತಿದೆ. ಕಾರು ಖರೀದಿ ಸಾಮಾನ್ಯವಾಗಿದೆ. ಇಂಥ ಸಂದರ್ಭ ಎಥೆನಾಲ್‌ ಇತ್ಯಾದಿ ಪರ್ಯಾಯ ಇಂಧನಗಳ ಪ್ರಯೋಗಕ್ಕೂ ಭಾರತ ಮುಕ್ತವಾಗಿರುವುದು ಗಮನಾರ್ಹ. ದೇಶವಾಗಿ ಭಾರತ ಬೆಳೆಯುತ್ತಿರುವುದಕ್ಕೆ ಇದೊಂದು ಪುಟ್ಟ ಉದಾಹರಣೆ.

ಕಾಂಟೆಸ್ಸಾ, ಫಿಯೆಟ್‌ ಪದ್ಮಿನಿ, ಮಾರುತಿ 1000, ಮಾರುತಿ ಜೆನ್‌, ಮಾರುತಿ ಒಮಿನಿ ಇತ್ಯಾದಿ ಕೆಲ ಮಾದರಿಗಳ ಕಾರುಗಳು ಮಾತ್ರ 1980-90ರಲ್ಲಿ ನಮ್ಮಲ್ಲಿತ್ತು. ಆದರೆ ಈಗ ಮಾರುತಿ, ಹುಂಡೈ, ಟಾಟಾ ಮೋಟಾರ್ಸ್‌, ಮಹೀಂದ್ರಾ, ಹೋಂಡಾ, ಕಿಯಾ, ರೆನಾಲ್ಟ್‌ ಸೇರಿ 35ಕ್ಕೂ ಹೆಚ್ಚು ದೇಶ-ವಿದೇಶಿ ಬ್ರಾಂಡ್‌ಗಳಿವೆ.

✍️ ಕೇಶವ ಪ್ರಸಾದ್ ಕಿದೂರ್

Post a Comment (0)
Previous Post Next Post