ಕರ್ನಾಟಕ ಶಿಕ್ಷಕರ ನೇಮಕಾತಿ 2026: ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು, ಅರ್ಜಿ ಸಲ್ಲಿಕೆ ವಿಧಾನ

KARNATAKA SCHOOL EDUCATION DEPARTMENT

ಕರ್ನಾಟಕ ಶಿಕ್ಷಕರ ನೇಮಕಾತಿ 2026

ಅಭ್ಯರ್ಥಿಗಳಿಗೆ ಪ್ರಮುಖ ಸೂಚನೆಗಳು ಮತ್ತು ಅರ್ಜಿ ಮಾರ್ಗದರ್ಶಿ

🔴 ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
15 ಸೆಪ್ಟೆಂಬರ್ 2026
ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
📅 ಅರ್ಜಿ ಪ್ರಾರಂಭ 18-08-2026
ಕೊನೆಯ ದಿನಾಂಕ15-09-2026
💻 ಅರ್ಜಿ ವಿಧಾನ Online
📄 ಅಧಿಕೃತ ಸೂಚನೆ 5 Pages PDF
📢 ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ ಶಿಕ್ಷಕರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ನೇರ ನೇಮಕಾತಿಯಿಂದ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಸಂಬಂಧಿಸಿದ ಶೈಕ್ಷಣಿಕ ಅರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಮತ್ತು ಇತರ ಅರ್ಹತಾ ವಿವರಗಳನ್ನು ಸಂಬಂಧಿಸಿದ ಅಧಿಸೂಚನೆಯಲ್ಲಿ ಪರಿಶೀಲಿಸಬೇಕು.

👨‍🏫 ಸಂಬಂಧಿಸಿದ ಶಿಕ್ಷಕರ ಹುದ್ದೆಗಳು
PST – 1 ರಿಂದ 5 PE-Grade-II – 1 ರಿಂದ 8 GPT – 6 ರಿಂದ 8 CST – 1 ರಿಂದ 8 AM PE-Grade-I
📅 ಪ್ರಮುಖ ದಿನಾಂಕಗಳು
ವಿವರ ದಿನಾಂಕ
ಅಧಿಸೂಚನೆ ಹೊರಡಿಸಿದ ದಿನಾಂಕ 10-08-2026
ಅರ್ಜಿ ಸಲ್ಲಿಕೆ ಪ್ರಾರಂಭ 18-08-2026
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ 15-09-2026
⚠️ ಅತ್ಯಂತ ಮುಖ್ಯವಾದ ಸೂಚನೆಗಳು
🔴 Final Submit ಮಾಡುವ ಮೊದಲು ಬಹಳ ಎಚ್ಚರಿಕೆ ವಹಿಸಿ.

ಅಭ್ಯರ್ಥಿಯು ಅಂತಿಮವಾಗಿ Submit ಮಾಡಿ Declaration ನೀಡಿದ ನಂತರ ಅರ್ಜಿಯಲ್ಲಿ ಯಾವುದೇ ಮಾಹಿತಿಯನ್ನು Edit ಮಾಡಲು ಅವಕಾಶವಿರುವುದಿಲ್ಲ.

ಆದ್ದರಿಂದ ವೈಯಕ್ತಿಕ ವಿವರಗಳು, ಮೀಸಲಾತಿ, ಶೈಕ್ಷಣಿಕ ಅರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ ಮತ್ತು ಪರೀಕ್ಷೆ ಬರೆಯುವ ಜಿಲ್ಲೆ ಸೇರಿದಂತೆ ಎಲ್ಲಾ ವಿವರಗಳನ್ನು ಪರಿಶೀಲಿಸಿದ ನಂತರವೇ Final Submit ಮಾಡಬೇಕು.

⚠️ ಅಭ್ಯರ್ಥಿಗಳು ತಪ್ಪದೇ ಗಮನಿಸಬೇಕಾದ ವಿಷಯಗಳು
  • ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸಿ.
  • ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡಬೇಕು.
  • AM ಮತ್ತು PE-Grade-I ಹುದ್ದೆಗಳಿಗೆ ಸಂಬಂಧಿಸಿದ ವಿಭಾಗದ ಆಯ್ಕೆಯನ್ನು ಎಚ್ಚರಿಕೆಯಿಂದ ಮಾಡಬೇಕು.
  • ಮೀಸಲಾತಿ ಬಯಸುವವರು ಸಂಬಂಧಿಸಿದ ವಿಭಾಗವನ್ನು ಸರಿಯಾಗಿ ಭರ್ತಿ ಮಾಡಬೇಕು.
  • Passport Size Photograph ಮತ್ತು Signature ಅನ್ನು ನಿಗದಿತ ಗರಿಷ್ಠ 50 KB ಗಾತ್ರದಲ್ಲಿ Upload ಮಾಡಬೇಕು.
  • ಶೈಕ್ಷಣಿಕ ಮತ್ತು ವೃತ್ತಿಪರ ಶಿಕ್ಷಣದ ಅಂಕಗಳನ್ನು ಅಂಕಪಟ್ಟಿಯಂತೆ ಸರಿಯಾಗಿ ನಮೂದಿಸಬೇಕು.
  • Final Declaration ಮಾಡುವ ಮೊದಲು ಅರ್ಜಿಯಲ್ಲಿರುವ ಎಲ್ಲಾ ಮಾಹಿತಿಯನ್ನು ಕೂಲಂಕಷವಾಗಿ ಪರಿಶೀಲಿಸಬೇಕು.
ಅರ್ಜಿ ಸಲ್ಲಿಸುವ ಮೊದಲು Checklist
  • ವೈಯಕ್ತಿಕ ವಿವರಗಳನ್ನು ಪರಿಶೀಲಿಸಿ
  • ಜನ್ಮ ದಿನಾಂಕ ಪರಿಶೀಲಿಸಿ
  • ಮೊಬೈಲ್ ಸಂಖ್ಯೆ ಸರಿಯಾಗಿದೆಯೇ ನೋಡಿ
  • E-mail ID ಪರಿಶೀಲಿಸಿ
  • ಮೀಸಲಾತಿ ವಿವರ ಪರಿಶೀಲಿಸಿ
  • ಶೈಕ್ಷಣಿಕ ಅಂಕಗಳನ್ನು ಸರಿಯಾಗಿ ನಮೂದಿಸಿ
  • ವೃತ್ತಿಪರ ಶಿಕ್ಷಣದ ಅಂಕಗಳನ್ನು ಪರಿಶೀಲಿಸಿ
  • ಹುದ್ದೆ / ವೃಂದ ಸರಿಯಾಗಿ ಆಯ್ಕೆ ಮಾಡಿ
  • ಜಿಲ್ಲೆ / ವಿಭಾಗವನ್ನು ಪರಿಶೀಲಿಸಿ
  • ಪರೀಕ್ಷೆ ಬರೆಯುವ ಜಿಲ್ಲೆಯ ಆದ್ಯತೆ ಪರಿಶೀಲಿಸಿ
  • Passport Photo Upload ಮಾಡಿ
  • Signature Upload ಮಾಡಿ
  • ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿ
  • ಅರ್ಜಿ ಶುಲ್ಕ ಪಾವತಿಸಿ
  • Final Declaration ಮಾಡುವ ಮೊದಲು Preview ಪರಿಶೀಲಿಸಿ
  • ಅರ್ಜಿಯ ಮುದ್ರಿತ ಪ್ರತಿಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ
📄

ಅಧಿಕೃತ ಅಭ್ಯರ್ಥಿಗಳ ಸೂಚನೆಗಳು

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯು ಪ್ರಕಟಿಸಿರುವ ಮೂಲ ಅಧಿಕೃತ “ಅಭ್ಯರ್ಥಿಗಳಿಗೆ ಸೂಚನೆಗಳು” PDF ಅನ್ನು ಸಂಪೂರ್ಣವಾಗಿ ಓದಿ.

📥 ಅಧಿಕೃತ PDF Download ಮಾಡಿ
📚 ಅಭ್ಯರ್ಥಿಗಳಿಗೆ ವಿವರವಾದ ಸೂಚನೆಗಳು
📝 1. ಅರ್ಜಿ ಸಲ್ಲಿಸುವ ಮೊದಲು ಗಮನಿಸಬೇಕಾದ ಸೂಚನೆಗಳು
  1. ಅಭ್ಯರ್ಥಿಗಳು Online ಮೂಲಕ ಅರ್ಜಿ ಭರ್ತಿ ಮಾಡುವ ಮುನ್ನ ವಿವಿಧ ವೃಂದಗಳಾದ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (PST – 1 ರಿಂದ 5ನೇ ತರಗತಿ, PE-Grade-II – 1 ರಿಂದ 8), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ (GPT – 6 ರಿಂದ 8ನೇ ತರಗತಿ, CST – 1 ರಿಂದ 8), ಪ್ರೌಢಶಾಲಾ ಸಹ ಶಿಕ್ಷಕರ AM ಮತ್ತು PE-Grade-I ಹುದ್ದೆಗಳಿಗೆ ಸಂಬಂಧಿಸಿದಂತೆ ಆಯಾ ಜಿಲ್ಲಾ / ವಿಭಾಗೀಯ ಪ್ರಾಧಿಕಾರಿಗಳು ಹೊರಡಿಸಿರುವ ಅಧಿಸೂಚನೆಗಳಲ್ಲಿ ಇರುವ ಶೈಕ್ಷಣಿಕ ಅರ್ಹತೆ, ವಯೋಮಿತಿ, ಶುಲ್ಕ, ಮೀಸಲಾತಿ ಇತ್ಯಾದಿಗಳನ್ನು ಓದಿ ಅರ್ಥಮಾಡಿಕೊಳ್ಳಬೇಕು.
  2. ಅರ್ಜಿ ಸಲ್ಲಿಸುವ ಪ್ರಕ್ರಿಯೆಯು ಒಂದು ಬಾರಿಯ ನೋಂದಣಿ ಪ್ರಕ್ರಿಯೆಯನ್ನು ಒಳಗೊಂಡಿದ್ದು, ಅಭ್ಯರ್ಥಿಗಳು ನೀಡಿರುವ ಮಾಹಿತಿಯನ್ನು ನೇಮಕಾತಿಯ ಮುಂದಿನ ಎಲ್ಲಾ ಹಂತಗಳಲ್ಲಿ ಪರಿಗಣಿಸಲಾಗುವುದರಿಂದ ಅತ್ಯಂತ ಜಾಗರೂಕತೆಯಿಂದ ಎಲ್ಲಾ ಮಾಹಿತಿಯನ್ನು ಭರ್ತಿ ಮಾಡಬೇಕು.
  3. ಅರ್ಜಿ ಸಲ್ಲಿಸುವ ಮುನ್ನ ಅಭ್ಯರ್ಥಿಯು User ID ಮತ್ತು Password ಸೃಷ್ಟಿಸಿಕೊಂಡು Online ನಲ್ಲಿ Login ಆಗಬೇಕು. ನಂತರದ ಹಂತಗಳಲ್ಲಿ ವೈಯಕ್ತಿಕ ವಿವರ, ಮೀಸಲಾತಿ ವಿವರ, ವೃತ್ತಿಪರ ಶಿಕ್ಷಣ ಅರ್ಹತೆ ಮತ್ತು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗಳ ವಿವರಗಳನ್ನು ಭರ್ತಿ ಮಾಡಬೇಕು.
  4. ಅಭ್ಯರ್ಥಿಗಳು ಅರ್ಜಿಗಳನ್ನು Online ಮೂಲಕವೇ ಸಲ್ಲಿಸಬೇಕು. ಇತರ ಯಾವುದೇ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
  5. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿ ಅರ್ಜಿಗಳನ್ನು ಸಲ್ಲಿಸುವುದು ಉತ್ತಮ.
  6. ಅಭ್ಯರ್ಥಿಗಳು ಒಂದೇ ಅರ್ಜಿಯಲ್ಲಿ ತಾವು ಅರ್ಹರಾಗಿರುವ ಎಲ್ಲಾ ವೃಂದದ ಹುದ್ದೆಗಳಿಗೆ ರಾಜ್ಯದ ಒಂದು ಅಥವಾ ಒಂದಕ್ಕಿಂತ ಹೆಚ್ಚಿನ ಜಿಲ್ಲೆಗಳ ಅಥವಾ ವಿಭಾಗಗಳ ಅಧಿಸೂಚನೆಗಳಿಗೆ ಅರ್ಜಿ ಸಲ್ಲಿಸಬಹುದು.
  7. 2026ನೇ ಸಾಲಿನ PST, GPT ಮತ್ತು AM ನೇಮಕಾತಿಗೆ ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಈ ಅಧಿಸೂಚನೆಗಳಲ್ಲಿ ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಒಂದೇ Online ಅರ್ಜಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
📍 2. ಹುದ್ದೆ, ಜಿಲ್ಲೆ ಮತ್ತು ವಿಭಾಗ ಆಯ್ಕೆ
  1. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಒಂದು ವೃಂದದ ಒಂದು ಹುದ್ದೆಗೆ ಒಂದು ಜಿಲ್ಲೆಯನ್ನು ಮಾತ್ರ ಆಯ್ಕೆ ಮಾಡತಕ್ಕದ್ದು. ಒಂದು ಜಿಲ್ಲೆಯಲ್ಲಿ ಒಂದಕ್ಕಿಂತ ಹೆಚ್ಚು ವೃಂದಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಅದೇ ರೀತಿ ಬೇರೆ ಬೇರೆ ವೃಂದದ ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  2. ಪ್ರೌಢಶಾಲಾ ಸಹ ಶಿಕ್ಷಕರ (AM) ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ Grade-I (PE-Grade-I) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಒಂದು ವೃಂದಕ್ಕೆ ಒಂದು (01) ವಿಭಾಗದಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  3. ಯಾವುದಾದರೂ ಒಂದು ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ವೃಂದದ ಹುದ್ದೆಗಳಿಗೆ ಅಭ್ಯರ್ಥಿಯು ತನ್ನ ಅರ್ಹತೆಗೆ ತಕ್ಕಂತೆ ಅರ್ಜಿ ಸಲ್ಲಿಸಬಹುದು. ಬೇರೆ ಬೇರೆ ವೃಂದಕ್ಕೆ ಬೇರೆ ಬೇರೆ ವಿಭಾಗದಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
  4. ಒಂದಕ್ಕಿಂತ ಹೆಚ್ಚು ವೃಂದದ ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಲ್ಲಿ, ಯಾವ ವೃಂದದ ಯಾವ ಹುದ್ದೆಗೆ ಆಯ್ಕೆಯಾಗಲು ಬಯಸುತ್ತಾರೆ ಎಂಬುದರ ಆದ್ಯತಾಕ್ರಮವನ್ನು ಅರ್ಜಿ ಸಲ್ಲಿಸುವಾಗ ನೀಡುವುದು ಕಡ್ಡಾಯವಾಗಿರುತ್ತದೆ.
  5. ಅಭ್ಯರ್ಥಿಯು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಬಯಸುವ ಜಿಲ್ಲೆಯ ಆದ್ಯತೆಯನ್ನು ಅರ್ಜಿಯಲ್ಲಿ ತಪ್ಪದೇ ನಮೂದಿಸಬೇಕು.
  6. ಪರೀಕ್ಷಾ ಕೇಂದ್ರದ ಹಂಚಿಕೆಯನ್ನು ಅಭ್ಯರ್ಥಿಗಳ ಸಂಖ್ಯೆ ಮತ್ತು ಪರೀಕ್ಷಾ ಕೇಂದ್ರಗಳ ಲಭ್ಯತೆಯ ಆಧಾರದ ಮೇಲೆ ಮಾಡಲಾಗುತ್ತದೆ.
  7. ಪರೀಕ್ಷಾ ಕೇಂದ್ರಗಳಿಗೆ ಅಭ್ಯರ್ಥಿಗಳನ್ನು ಹಂಚಿಕೆ ಮಾಡುವಾಗ ವಿಶೇಷ ಚೇತನ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆಯನ್ನು ನೀಡಲಾಗುತ್ತದೆ.
  8. ಅಭ್ಯರ್ಥಿಯು Online ಅರ್ಜಿಯಲ್ಲಿ ಆಯ್ಕೆ ಮಾಡಿಕೊಂಡ ಹುದ್ದೆಯ ವೃಂದದ ಅಧಿಸೂಚನೆಯನ್ನು — PST ವೃಂದ, GPT ವೃಂದ ಅಥವಾ ಪ್ರೌಢಶಾಲಾ ಸಹ ಶಿಕ್ಷಕರ (AM) ವೃಂದ — ಸ್ಪಷ್ಟವಾಗಿ ನಮೂದಿಸಬೇಕು.
  9. ಕಲ್ಯಾಣ ಕರ್ನಾಟಕ ಪ್ರದೇಶ ವ್ಯಾಪ್ತಿಯ 07 ಜಿಲ್ಲೆಗಳಲ್ಲಿ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದ ಹುದ್ದೆಗಳಿಗೆ ಹಾಗೂ ಕಲ್ಯಾಣ ಕರ್ನಾಟಕ ಹೊರಗಿನ ವೃಂದದ ಹುದ್ದೆಗಳಿಗೆ ಪ್ರತ್ಯೇಕ ಅಧಿಸೂಚನೆಗಳಿದ್ದು, ಎರಡೂ ವೃಂದಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸುವಾಗ ಪ್ರತ್ಯೇಕವಾಗಿ ಅಧಿಸೂಚನೆಗಳನ್ನು ಆಯ್ಕೆ ಮಾಡಿಕೊಂಡು, ಸಂಬಂಧಿಸಿದ ಶುಲ್ಕವನ್ನು ಪಾವತಿಸುವುದನ್ನು ಖಚಿತಪಡಿಸಿಕೊಳ್ಳಬೇಕು.
📷 3. Photograph, Signature ಮತ್ತು ದಾಖಲೆಗಳು
  1. ಅಭ್ಯರ್ಥಿಗಳು ತಮ್ಮ ಇತ್ತೀಚಿನ Passport Size ಅಳತೆಯ ಭಾವಚಿತ್ರ (ಗರಿಷ್ಠ 50KB) ಮತ್ತು ಸಹಿಯನ್ನು (ಗರಿಷ್ಠ 50KB) Scan ಮಾಡಿ ಅರ್ಜಿಯೊಂದಿಗೆ Upload ಮಾಡುವುದು ಕಡ್ಡಾಯ.
  2. ಅಭ್ಯರ್ಥಿಗಳು Online ಅರ್ಜಿಯಲ್ಲಿ ಮಾಹಿತಿಗಳನ್ನು ಭರ್ತಿ ಮಾಡುವಾಗ ಪ್ರತಿಯೊಂದು ಹಂತದಲ್ಲಿಯೂ ಕಡ್ಡಾಯವಾಗಿ Submit ಮಾಡಬೇಕು.
  3. Online ಅರ್ಜಿಯ ಪ್ರತಿಯೊಂದು ಹಂತದಲ್ಲಿ ಅಗತ್ಯವಿರುವ ಮಾಹಿತಿಯ ಅಧಿಕೃತ ದಾಖಲೆಗಳನ್ನು ಜಾಗರೂಕತೆಯಿಂದ ಮೊದಲೇ ಸಿದ್ಧಪಡಿಸಿಕೊಂಡು, ಸರಿಯಾದ ಮಾಹಿತಿ ಭರ್ತಿ ಮಾಡಿರುವುದನ್ನು ಖಾತರಿಪಡಿಸಿಕೊಂಡ ನಂತರವೇ Online ಅರ್ಜಿಗಳನ್ನು ಪೂರ್ಣಗೊಳಿಸಿ Submit ಮಾಡಬೇಕು.
⚠️ 4. Final Submit ಮತ್ತು ಮಾಹಿತಿ ಪರಿಶೀಲನೆ
  1. ಅಭ್ಯರ್ಥಿಯು ಅಂತಿಮವಾಗಿ Submit ಮಾಡಿ ಘೋಷಣೆ (Declaration) ನೀಡಿದ ನಂತರ ಅರ್ಜಿಯಲ್ಲಿ ಯಾವುದೇ ಮಾಹಿತಿಯನ್ನು ತಿದ್ದುಪಡಿ (Edit) ಮಾಡಲು ಅವಕಾಶವಿರುವುದಿಲ್ಲ.
  2. ಅಭ್ಯರ್ಥಿಯು ಅಂತಿಮವಾಗಿ Declaration ಮಾಡುವ ಮೊದಲು ತಮ್ಮ ವೈಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕ್ಷೆಯನ್ನು ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಕೂಲಂಕಷವಾಗಿ ಓದಿ, ಸರಿಯಾದ ಮಾಹಿತಿ ಭರ್ತಿ ಮಾಡಿರುವುದನ್ನು ದೃಢಪಡಿಸಿಕೊಂಡ ನಂತರವೇ ಅರ್ಜಿಯನ್ನು Submit ಮಾಡಬೇಕು.
  3. ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡಬೇಕು.
  4. ಅರ್ಜಿಯಲ್ಲಿ ನೀಡಿರುವ ಮಾಹಿತಿಗಳು ದೋಷಪೂರಿತ ಹಾಗೂ ತಪ್ಪಾಗಿದ್ದಲ್ಲಿ ಅಭ್ಯರ್ಥಿಗಳೇ ಸಂಪೂರ್ಣವಾಗಿ ನೇರ ಜವಾಬ್ದಾರರಾಗಿರುತ್ತಾರೆ ಮತ್ತು ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
  5. ಒಂದು ವೇಳೆ ಅಭ್ಯರ್ಥಿಗಳು Online ಮೂಲಕ ಅರ್ಜಿಯನ್ನು ಸಲ್ಲಿಸಿದ ನಂತರ ತಿದ್ದುಪಡಿ ಮಾಡಲು ಬಯಸಿದಲ್ಲಿ, ಹೊಸದಾಗಿ ಅರ್ಜಿ ಸಲ್ಲಿಸಿ ನಿಗದಿತ ಶುಲ್ಕವನ್ನು ಪಾವತಿಸತಕ್ಕದ್ದು.
  6. ಶುಲ್ಕ ಪಾವತಿಸಿದ ನಂತರ ಅರ್ಜಿಯ ಪ್ರತಿಯನ್ನು ಮುದ್ರಿಸಿಕೊಂಡು ಮಾಹಿತಿಯು ಸರಿಯಾಗಿರುವ ಬಗ್ಗೆ ಪುನಃ ಓದಿ, ವೈಯಕ್ತಿಕ ವಿವರ, ಮೀಸಲಾತಿ, ವಿದ್ಯಾರ್ಹತೆ, ಆಯ್ಕೆ ಮಾಡಿಕೊಂಡಿರುವ ವೃಂದ, ಹುದ್ದೆ, ಪರೀಕ್ಷೆ ಬರೆಯುವ ಜಿಲ್ಲೆ ಇತ್ಯಾದಿ ಮಾಹಿತಿಗಳನ್ನು ಪರಿಶೀಲಿಸಬೇಕು.
  7. ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
💳 5. ಅರ್ಜಿ ಶುಲ್ಕ ಪಾವತಿ
  1. ಶುಲ್ಕವನ್ನು ONLINE ಮೂಲಕ ಅಂದರೆ Internet Banking, Credit Card, Debit Card ಅಥವಾ Bank Challan ಮೂಲಕ ಪಾವತಿಸತಕ್ಕದ್ದು. ಇನ್ಯಾವುದೇ ರೂಪದಲ್ಲಿ ಶುಲ್ಕ ಪಾವತಿಸಲು ಅವಕಾಶವಿರುವುದಿಲ್ಲ.
  2. Internet Crash ಅನ್ನು ತಪ್ಪಿಸಲು ನಿಗದಿಪಡಿಸಿದ ಕೊನೆಯ ದಿನಾಂಕದವರೆಗೂ ಕಾಯದೆ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಉತ್ತಮ.
  3. ಒಮ್ಮೆ ಪರೀಕ್ಷಾ ಶುಲ್ಕವನ್ನು ಪಾವತಿಸಿದ ನಂತರ ಯಾವುದೇ ಸಂದರ್ಭದಲ್ಲಿಯೂ ಹಿಂದಿರುಗಿಸಲಾಗುವುದಿಲ್ಲ ಹಾಗೂ ಸದರಿ ಶುಲ್ಕವನ್ನು ಇತರೆ ಯಾವುದೇ ಪರೀಕ್ಷೆ ಅಥವಾ ನೇಮಕಾತಿಗಳಿಗೆ ಮರುಹೊಂದಾಣಿಕೆ ಮಾಡಿಕೊಳ್ಳಲಾಗುವುದಿಲ್ಲ.
  4. ಅರ್ಜಿ ಶುಲ್ಕವನ್ನು Challan ಮೂಲಕ ಪಾವತಿಸುವವರು Online Challan ಅನ್ನು Download ಮಾಡಿಕೊಂಡು State Bank of India ಬ್ಯಾಂಕ್‌ನಲ್ಲಿ ಅರ್ಜಿ ಶುಲ್ಕ ಪಾವತಿಸಬೇಕು.
  5. ಶುಲ್ಕ ಪಾವತಿಸಿದ ನಂತರ Online ಅರ್ಜಿಯಲ್ಲಿ Challan Number (ATRN) Generate ಆಗಲು 24 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಬಹುದು.
  6. Challan Number (ATRN) Generate ಆದ ನಂತರವೇ ಅರ್ಜಿಯ ಮುದ್ರಿತ ಪ್ರತಿಯನ್ನು ಪಡೆದುಕೊಳ್ಳಬೇಕು.
📱 6. Personal Details, Reservation ಮತ್ತು ಅರ್ಜಿ ಪ್ರತಿ
  1. Online ಅರ್ಜಿಯಲ್ಲಿ ನೀಡಿರುವ ಮಾಹಿತಿಯನ್ನೇ ಆಧಾರವಾಗಿಟ್ಟುಕೊಂಡು ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಯನ್ನು ನಡೆಸುವುದರಿಂದ, ಯಾವುದೇ ಹಂತದಲ್ಲಿ ಅಪೂರ್ಣ / ಅಸ್ಪಷ್ಟ / ತಪ್ಪು ಮಾಹಿತಿ ನೀಡಿದಲ್ಲಿ ಅಭ್ಯರ್ಥಿಗಳೇ ಸಂಪೂರ್ಣ ಹೊಣೆಗಾರರಾಗಿರುತ್ತಾರೆ ಹಾಗೂ ಅಂತಹವರ ಅಭ್ಯರ್ಥಿತನವನ್ನು ರದ್ದುಗೊಳಿಸಲಾಗುವುದು.
  2. ಅರ್ಜಿಯಲ್ಲಿ ನಮೂದಿಸುವ ಮೊಬೈಲ್ ಸಂಖ್ಯೆ ಮತ್ತು E-mail ವಿಳಾಸ ಅಭ್ಯರ್ಥಿಯದ್ದೇ ಆಗಿರತಕ್ಕದ್ದು. ಅದನ್ನು ನೇಮಕಾತಿ ಪ್ರಕ್ರಿಯೆ ಮುಗಿಯುವ ಮೊದಲು ಬದಲಾವಣೆ ಮಾಡಿದಲ್ಲಿ ಆಗಬಹುದಾದ ಪರಿಣಾಮಗಳಿಗೆ ಅಭ್ಯರ್ಥಿಗಳೇ ಹೊಣೆಗಾರರಾಗಿರುತ್ತಾರೆ.
  3. Online ಅರ್ಜಿಯಲ್ಲಿ ಮೀಸಲಾತಿ ಸೌಲಭ್ಯಕ್ಕಾಗಿ ಇರುವ ಅಂಕಣವನ್ನು ಮೀಸಲಾತಿ ಬಯಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಭರ್ತಿ ಮಾಡತಕ್ಕದ್ದು.
  4. ಮೀಸಲಾತಿಯ ಅಂಕಣವನ್ನು ಖಾಲಿ ಬಿಟ್ಟಲ್ಲಿ ಅಥವಾ ತಪ್ಪಾಗಿ ನಮೂದಿಸಿದಲ್ಲಿ ಸಂಬಂಧಿಸಿದ ಮೀಸಲಾತಿಗೆ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದಿಲ್ಲ. ಅದರಿಂದಾಗುವ ತೊಂದರೆಗಳಿಗೆ ಅಭ್ಯರ್ಥಿಗಳೇ ನೇರ ಹೊಣೆಗಾರರಾಗಿರುತ್ತಾರೆ.
  5. ನಂತರ ಯಾವುದೇ ಹಂತದಲ್ಲಿ ಮೀಸಲಾತಿಯನ್ನು ಸೇರ್ಪಡೆ / ತಿದ್ದುಪಡಿ ಮಾಡಲು ಅವಕಾಶವಿರುವುದಿಲ್ಲ.
  6. ಶುಲ್ಕ ಪಾವತಿಸಿದ ಕೂಡಲೇ Online ಮೂಲಕ ಸಲ್ಲಿಸಿದ ಅರ್ಜಿಯ ಮುದ್ರಿತ ಮೂಲ ಪ್ರತಿಯನ್ನು ಪಡೆದುಕೊಂಡು ಮುಂದಿನ ಉಪಯೋಗಕ್ಕಾಗಿ ಸಂರಕ್ಷಿಸಿ ಇಟ್ಟುಕೊಳ್ಳಬೇಕು.
  7. ಒಂದು ವೇಳೆ ಮುದ್ರಿತ ಅರ್ಜಿಯು ಕಳೆದುಹೋದರೆ ಇಲಾಖೆಯ ವೆಬ್‌ಸೈಟ್‌ನಲ್ಲಿ User ID ಮತ್ತು Password ನಮೂದಿಸಿ ಪ್ರತಿಯನ್ನು ಪಡೆದುಕೊಳ್ಳಬಹುದು.
🎓 7. ಶೈಕ್ಷಣಿಕ ಅಂಕಗಳು ಮತ್ತು Grade Conversion
  1. ಶೈಕ್ಷಣಿಕ ಹಾಗೂ ವೃತ್ತಿಪರ ಶಿಕ್ಷಣದ ಅಂಕ ವಿವರಗಳನ್ನು ಅಂಕಪಟ್ಟಿಯಲ್ಲಿರುವಂತೆ ಎಲ್ಲಾ ವರ್ಷಗಳ ಗರಿಷ್ಠ ಅಂಕಗಳು ಹಾಗೂ ಪಡೆದ ಅಂಕಗಳನ್ನು ನಿಗದಿತ ಅಂಕಣಗಳಲ್ಲಿ ಭರ್ತಿ ಮಾಡಬೇಕು.
  2. ಕೆಲವು ವಿಶ್ವವಿದ್ಯಾಲಯಗಳ ಅಂಕಪಟ್ಟಿಯಲ್ಲಿ ಅಂಕಗಳಿಗೆ ಬದಲಾಗಿ Grade ನಮೂದಿಸಿರುವ ಸಂದರ್ಭದಲ್ಲಿ ಸಂಬಂಧಪಟ್ಟ ವಿಶ್ವವಿದ್ಯಾಲಯದ ನಿಯಮಾನುಸಾರ Grade ಅನ್ನು ಅಂಕಗಳಿಗೆ ಪರಿವರ್ತಿಸಿ ನಿಗದಿತ ಅಂಕಣಗಳಲ್ಲಿ ಅಂಕಗಳನ್ನು ಭರ್ತಿ ಮಾಡಬೇಕು.
  3. ಸಂಬಂಧಿತ Board / University ಗಳು Grade ನಿಂದ ಅಂಕಗಳಿಗೆ ಅಳವಡಿಸಲಾಗುವ ಅಂಕ ಪರಿವರ್ತನಾ ಪಟ್ಟಿಯನ್ನು Scan ಮಾಡಿ ಕಡ್ಡಾಯವಾಗಿ Upload ಮಾಡಬೇಕು.
  4. ಕೆಲವು ವಿಶ್ವವಿದ್ಯಾಲಯಗಳಲ್ಲಿ ಕೆಲವು ವಿಷಯಗಳನ್ನು (ಉದಾ: Constitution of India, Computer Fundamental ಇತ್ಯಾದಿ) ಪರೀಕ್ಷಾ ಪೂರಕ ವಿಷಯವಾಗಿ (Subsidiary Subject) ಅಧ್ಯಯನ ಮಾಡಬೇಕಾಗಿರುತ್ತದೆ.
  5. ಈ ವಿಷಯಗಳ ಅಂಕಗಳನ್ನು ವಿಶ್ವವಿದ್ಯಾಲಯವು ಒಟ್ಟು ಅಂಕಗಳಿಗೆ ಪರಿಗಣಿಸಿದ್ದಲ್ಲಿ, ಅಂಕಪಟ್ಟಿಯ Footnote ನಲ್ಲಿ ನಮೂದಿಸಿರುವ ಪರಿಗಣಿಸುವ ವಿಧಾನದಂತೆ ಆ ಅಂಕಗಳನ್ನು ಸೇರಿಸಿ Online ಅರ್ಜಿಯಲ್ಲಿ ಭರ್ತಿ ಮಾಡಬೇಕು.
  6. ಪದವಿ / B.Ed. ಯ ಎಲ್ಲಾ ವರ್ಷಗಳ ಅಂಕಪಟ್ಟಿಗಳಲ್ಲಿ ನಮೂದಿಸಲಾದ ಗರಿಷ್ಠ ಅಂಕಗಳು (Maximum Marks) ಹಾಗೂ ಪಡೆದ ಅಂಕಗಳನ್ನು (Obtained Marks) ಪರಿಗಣಿಸಲಾಗುವುದು.
  7. ಅಭ್ಯರ್ಥಿಗಳು Online ಅರ್ಜಿ ಭರ್ತಿ ಮಾಡುವಾಗ ಹುದ್ದೆಗೆ ಪದವಿ / B.Ed. ಇತ್ಯಾದಿ ನಿಗದಿತ ಶೈಕ್ಷಣಿಕ ವಿದ್ಯಾರ್ಹತೆಯ ಅಂಕಪಟ್ಟಿಗಳಲ್ಲಿರುವ ಸೂಚನೆಗಳನ್ನು ಪರಿಗಣಿಸಿ ಗರಿಷ್ಠ, ಪಡೆದ ಅಂಕಗಳನ್ನು ಮತ್ತು ಶೇಕಡವಾರು ಅಂಕಗಳನ್ನು ಲೆಕ್ಕಾಚಾರ ಮಾಡಿ Online ಅರ್ಜಿಯಲ್ಲಿ ನಮೂದಿಸಬೇಕು.
  8. Online ಅರ್ಜಿಯಲ್ಲಿ ನಮೂದಿಸಿದ ಅಭ್ಯರ್ಥಿಯ ಎಲ್ಲಾ ವಿವರಗಳು ಸಮರ್ಪಕವಾಗಿವೆ ಎಂದು ದೃಢಪಡಿಸಿಕೊಂಡು ಘೋಷಣೆ ನೀಡಿದ ನಂತರ ಯಾವುದೇ ಬದಲಾವಣೆಗೆ ಅವಕಾಶ ಇರುವುದಿಲ್ಲ.
  9. ಜಾತಿ, ಆದಾಯ ಪ್ರಮಾಣಪತ್ರ ಮತ್ತು ಹೈ.ಕ. ಮೀಸಲಾತಿ 371(J) ಗೆ ಸಂಬಂಧಿಸಿದ ಮೀಸಲಾತಿ ಪ್ರಮಾಣಪತ್ರಗಳ RD Number ಅನ್ನು ನಮೂದಿಸಿದಲ್ಲಿ ಮಾತ್ರ ಸಂಬಂಧಿಸಿದ ಮೀಸಲಾತಿಯನ್ನು ಪರಿಗಣಿಸಲಾಗುವುದು.
🎫 8. ಪರೀಕ್ಷೆ ಮತ್ತು ಪ್ರವೇಶ ಪತ್ರ
  1. ಪರೀಕ್ಷಾ ಪ್ರವೇಶ ಪತ್ರವನ್ನು ಇಲಾಖೆಯ ವೆಬ್‌ಸೈಟ್ (www.schooleducation.karnataka.gov.in) ಅಥವಾ ದಿನಪತ್ರಿಕೆಯಲ್ಲಿ ಪ್ರಕಟಿಸಲಾಗುವ ನಿಗದಿತ ದಿನಾಂಕದಿಂದ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ Download ಮಾಡಿಕೊಳ್ಳಬಹುದು.
  2. ಪ್ರವೇಶ ಪತ್ರವಿಲ್ಲದೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುವುದಿಲ್ಲ.
  3. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ನಂತರ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
  4. ಈ ಅಧಿಸೂಚನೆಗೆ ಅನುಸಾರವಾಗಿ ಸಲ್ಲಿಸಿದ ಅರ್ಜಿಯನ್ನು ಇಲಾಖೆಯು ನಡೆಸುವ ಇತರ ಅಧಿಸೂಚನೆಗಳ ಆಯ್ಕೆ ಪರೀಕ್ಷೆಗಳಿಗೆ ಪರಿಗಣಿಸಲಾಗುವುದಿಲ್ಲ.
☎️ 9. ತಾಂತ್ರಿಕ ಸಮಸ್ಯೆ ಮತ್ತು ಸಹಾಯವಾಣಿ

Online ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಸಂದರ್ಭದಲ್ಲಿ ತಾಂತ್ರಿಕ ತೊಂದರೆ ಅಥವಾ ಪರೀಕ್ಷಾ ಸಂಬಂಧಿತ ಸಮಸ್ಯೆ ಎದುರಾದಲ್ಲಿ ಕೆಳಗಿನ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದು.

ಕೇಂದ್ರಿಕೃತ ದಾಖಲಾತಿ ಘಟಕ, ಬೆಂಗಳೂರು – ಸಹಾಯವಾಣಿ

🏛️ ಅಧಿಕೃತ ಮೂಲ

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ

ಅಧಿಕೃತ ವೆಬ್‌ಸೈಟ್:

https://schooleducation.karnataka.gov.in

📥

Official Candidate Instructions PDF

ಎಲ್ಲಾ ಸೂಚನೆಗಳನ್ನು ಮೂಲ ಅಧಿಕೃತ ದಾಖಲೆಯಲ್ಲಿ ಪರಿಶೀಲಿಸಲು PDF ಅನ್ನು Download ಮಾಡಿ.

📄 DOWNLOAD OFFICIAL PDF

You May Also Like 👇

Loading...
Post a Comment (0)
Previous Post Next Post