ಕೇಂದ್ರೀಕೃತ ದಾಖಲಾತಿ ಘಟಕ (CAC)
ಕರ್ನಾಟಕ ಶಿಕ್ಷಕರ ನೇಮಕಾತಿ 2026-27
ಅಧಿಕೃತ ಪ್ರಶ್ನೋತ್ತರಗಳು (Official FAQs) ಹಾಗೂ ಸ್ಪಷ್ಟೀಕರಣಗಳು
ಸರ್ಕಾರಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ PST (1-5), GPT (6-8), ಗಣಕ ವಿಜ್ಞಾನ, ದೈಹಿಕ ಶಿಕ್ಷಣ ಹಾಗೂ ಪ್ರೌಢಶಾಲಾ ಸಹಶಿಕ್ಷಕರ (AM/HSTR) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಅಭ್ಯರ್ಥಿಗಳಿಗೆ ಉದ್ಭವಿಸಿರುವ ಸಂದೇಹಗಳಿಗೆ ಶಾಲಾ ಶಿಕ್ಷಣ ಇಲಾಖೆಯು ನೀಡಿರುವ ಅಧಿಕೃತ ಪ್ರಶ್ನೋತ್ತರಗಳ ಸಂಪೂರ್ಣ ವಿವರ ಇಲ್ಲಿದೆ.
೧. ಆನ್‌ಲೈನ್ ಅರ್ಜಿಗೆ ಸಂಬಂಧಿಸಿದಂತೆ
ಪ್ರ.1: ಆನ್‌ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭದ ಮತ್ತು ಕೊನೆಯ ದಿನಾಂಕಗಳು ಯಾವುವು?
• ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 18/08/2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/09/2026
• ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15/09/2026
ಪ್ರ.2: ಅರ್ಜಿಯೊಂದಿಗೆ ಯಾವ ಯಾವ ದಾಖಲೆಗಳನ್ನು ಅಪ್ಲೋಡ್ (Upload) ಮಾಡಬೇಕು?
ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಾನ್-ಕ್ರೀಮಿ ಲೇಯರ್ ಹಾಗೂ 371ಜೆ ಮೀಸಲಾತಿ ಪ್ರಮಾಣ ಪತ್ರಗಳನ್ನು ಹೊರತುಪಡಿಸಿ, ಉಳಿದಂತೆ ಸಮತಲ ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ Upload ಮಾಡಬೇಕಿರುತ್ತದೆ.
೨. ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ
ಪ್ರ.3: ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ "ವ್ಯಾಸಂಗಕ್ಕಾಗಿ" ಎಂದಿದ್ದರೆ ನೇಮಕಾತಿಗೆ ಮಾನ್ಯವೇ?
ಇಲ್ಲ, "ವ್ಯಾಸಂಗಕ್ಕಾಗಿ" ಎಂದು ನಮೂದಿಸಿದ್ದಲ್ಲಿ ಪರಿಗಣಿಸುವುದಿಲ್ಲ. "ವ್ಯಾಸಂಗಕ್ಕಾಗಿ" ಅಥವಾ "ಉದ್ಯೋಗಕ್ಕಾಗಿ" ಎಂದು ನಮೂದಿಸದೇ ಇರುವ ಪ್ರಮಾಣ ಪತ್ರ ಅಥವಾ "ಉದ್ಯೋಗಕ್ಕಾಗಿ" ಎಂದು ನಮೂದಿಸಿರುವ ಪ್ರಮಾಣ ಪತ್ರವನ್ನೇ ಸಲ್ಲಿಸಬೇಕು. ಆಯ್ಕೆಯಾದಲ್ಲಿ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯ.
ಪ್ರ.4: ಜಾತಿ ಮೀಸಲಾತಿ ಕೋರಿ ಸಾಮಾನ್ಯ ವರ್ಗದಲ್ಲಿ (GM) ಆಯ್ಕೆಯಾದರೂ ಸಿಂಧುತ್ವ ಸಲ್ಲಿಸಬೇಕೇ?
ಹೌದು. ಮೀಸಲಾತಿ ಕೋರಿ ಮುಖ್ಯ ಆಯ್ಕೆಪಟ್ಟಿಯಲ್ಲಿ GM ನಲ್ಲಿ ಆಯ್ಕೆಯಾದರೂ ಅಥವಾ ಪ್ರವರ್ಗದಡಿಯಲ್ಲಿ ಆಯ್ಕೆಯಾದರೂ ಸಿಂಧುತ್ವ ಪ್ರಮಾಣ ಪತ್ರ ಕಡ್ಡಾಯ. ಸಿಂಧುತ್ವ ರದ್ದಾದಲ್ಲಿ ಮೆರಿಟ್ ಇದ್ದರೂ ನೇಮಕಾತಿ ರದ್ದಾಗುತ್ತದೆ.
ಪ್ರ.5: ಪರಿಶಿಷ್ಟ ಜಾತಿ (SC) ಅಭ್ಯರ್ಥಿಗಳು ನಮೂನೆ-ಡಿ ಯಲ್ಲಿ ಪ್ರವರ್ಗ-ಎ, ಬಿ, ಸಿ ನಮೂದಿಸುವುದು ಕಡ್ಡಾಯವೇ?
ಹೌದು, ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಗಳು ನಮೂನೆ 'ಡಿ' ಯಲ್ಲಿ (ಪ್ರವರ್ಗ-ಎ, ಪ್ರವರ್ಗ-ಬಿ, ಪ್ರವರ್ಗ-ಸಿ ಎಂಬುದಾಗಿ ನಮೂದಿಸಿದ) ಜಾತಿ ಪ್ರಮಾಣ ಪತ್ರ ಪಡೆದಿರುವುದು ಕಡ್ಡಾಯವಾಗಿರುತ್ತದೆ.
ಪ್ರ.6: ವ್ಯಾಸಂಗಕ್ಕೆ 2A ಹಾಗೂ ಉದ್ಯೋಗಕ್ಕೆ 3A ಪ್ರಮಾಣ ಪತ್ರವಿದ್ದರೆ ಯಾವುದನ್ನು ಸಲ್ಲಿಸಬೇಕು?
ಸಕ್ಷಮ ಪ್ರಾಧಿಕಾರದಿಂದ ಉದ್ಯೋಗಕ್ಕಾಗಿ ನೀಡಿರುವ 3A ಪ್ರವರ್ಗದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನೇ ಸಲ್ಲಿಸಬೇಕು.
೩. ಕಲ್ಯಾಣ ಕರ್ನಾಟಕ (371J) ಮೀಸಲಾತಿಗೆ ಸಂಬಂಧಿಸಿದಂತೆ
ಪ್ರ.7: 371ಜೆ ಪ್ರಮಾಣ ಪತ್ರದಲ್ಲಿ RD ನಂಬರ್ ಇರದಿದ್ದರೆ ಪರಿಗಣಿಸಲಾಗುವುದೇ?
ಇಲ್ಲ, ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಹಾಗೂ RD ನಂಬರ್ ಹೊಂದಿರುವ 371ಜೆ ಮೀಸಲಾತಿ ಪ್ರಮಾಣ ಪತ್ರವನ್ನು ಸಲ್ಲಿಸುವುದು ಕಡ್ಡಾಯ.
ಪ್ರ.8: HK ಪ್ರಮಾಣ ಪತ್ರವಿದ್ದು, Non-HK ಜಿಲ್ಲೆಗೆ ವಿವಾಹವಾಗಿದ್ದರೆ 371ಜೆ ಸೌಲಭ್ಯ ಸಿಗುವುದೇ?
ಹೌದು, ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ (RD ನಂಬರ್ ಹೊಂದಿರುವ) 371ಜೆ ಪ್ರಮಾಣ ಪತ್ರವನ್ನು ಸಲ್ಲಿಸಿ ಮೀಸಲಾತಿಯಡಿ ಅರ್ಜಿ ಸಲ್ಲಿಸಬಹುದು.
ಪ್ರ.9: 371ಜೆ ಅಭ್ಯರ್ಥಿಗಳು ಕಲ್ಯಾಣ ಕರ್ನಾಟಕೇತರ (Non-KK) ಜಿಲ್ಲೆಗಳಿಗೂ ಅರ್ಜಿ ಸಲ್ಲಿಸಬಹುದೇ?
ಹೌದು, ಅರ್ಜಿ ಸಲ್ಲಿಸಬಹುದು.
ಪ್ರ.10: 371ಜೆ ಅಭ್ಯರ್ಥಿಗಳು KK ಜಿಲ್ಲೆಗಳ ಶೇ.20 ರಷ್ಟು ಮಿಕ್ಕುಳಿದ ವೃಂದದ (RPC) ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಹೌದು, ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
ಪ್ರ.11: Non-KK ಅಭ್ಯರ್ಥಿಗಳು KK ಯ ಶೇ.20 ಮಿಕ್ಕುಳಿದ ವೃಂದ ಹಾಗೂ GBA ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಹೌದು, KK ಪ್ರದೇಶದ ಶೇ.20 ಮಿಕ್ಕುಳಿದ ವೃಂದ (RPC), GBA ವ್ಯಾಪ್ತಿಯ ಬೆಂಗಳೂರು ಕೇಂದ್ರ ಮತ್ತು ಉತ್ತರ ಜಿಲ್ಲೆಗಳ ಶೇ.92 ರಷ್ಟು ಹುದ್ದೆಗಳು ಹಾಗೂ ರಾಜ್ಯದ ಉಳಿದ 26 ಜಿಲ್ಲೆಗಳ ಶೇ.100 ರಷ್ಟು ಹುದ್ದೆಗಳಿಗೆ ರಾಜ್ಯದ ಯಾವುದೇ ಜಿಲ್ಲೆಯ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದು.
ಪ್ರ.12: 371ಜೆ ಅಭ್ಯರ್ಥಿಗಳು GBA ವ್ಯಾಪ್ತಿಯ ಶೇ.8 ರಷ್ಟು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಹೌದು, ನಿಗದಿತ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಬಹುದು.
ಪ್ರ.13 & 14: ಒಂದೇ ಜಿಲ್ಲೆಯಲ್ಲಿ KK ಮತ್ತು Non-KK ಎರಡಕ್ಕೂ ಅರ್ಜಿ ಸಲ್ಲಿಸಬಹುದೇ?
ಹೌದು, ಅಭ್ಯರ್ಥಿಯು 371ಜೆ ಮೀಸಲಾತಿ ಪ್ರಮಾಣ ಪತ್ರ ಹೊಂದಿದ್ದಲ್ಲಿ PST, GPT ಹಾಗೂ HSTR ಹುದ್ದೆಗಳಿಗೆ KK ಮತ್ತು Non-KK ಎರಡಕ್ಕೂ ಅರ್ಜಿ ಸಲ್ಲಿಸಬಹುದು.
ಪ್ರ.15: ಪ್ರಮಾಣ ಪತ್ರದಲ್ಲಿ "ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ" ಎಂದಿದ್ದರೆ ಮಾನ್ಯವೇ?
ಹೌದು, 371ಜೆ ಪ್ರಮಾಣ ಪತ್ರದಲ್ಲಿ "ವಿದ್ಯಾಭ್ಯಾಸ ಮತ್ತು ಸರ್ಕಾರಿ ಸೌಲಭ್ಯ" ಎಂದಿರುವುದರಿಂದ ಪರಿಗಣಿಸಲಾಗುವುದು.
೪. ಗ್ರಾಮೀಣ ಮೀಸಲಾತಿ ಮತ್ತು ಕೆನೆಪದರ (Creamy Layer) ನೀತಿ
ಪ್ರ.16 & 18: ಆದಾಯ ರೂ. 8.00 ಲಕ್ಷಕ್ಕಿಂತ ಹೆಚ್ಚಿರುವ GM ಹಾಗೂ 2A/2B/3A/3B ಅಭ್ಯರ್ಥಿಗಳಿಗೆ ಗ್ರಾಮೀಣ ಮೀಸಲಾತಿ ಸಿಗುವುದೇ?
ಇಲ್ಲ, ಗ್ರಾಮೀಣ ಮೀಸಲಾತಿಗೆ ಕೆನೆಪದರ ನೀತಿ (Creamy Layer Policy) ಅನ್ವಯಿಸುವುದರಿಂದ ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕಿಂತ ಹೆಚ್ಚಿದ್ದರೆ ಗ್ರಾಮೀಣ ಮೀಸಲಾತಿ ಕ್ಲೇಮು ಮಾಡಲು ಬರುವುದಿಲ್ಲ.
ಪ್ರ.17: ಆದಾಯ ರೂ. 8.00 ಲಕ್ಷಕ್ಕಿಂತ ಕಡಿಮೆ ಇರುವ GM ಅಭ್ಯರ್ಥಿಗಳು ಗ್ರಾಮೀಣ ಮೀಸಲಾತಿ ಪಡೆಯುವುದು ಹೇಗೆ?
ಕುಟುಂಬದ ಆದಾಯ ರೂ.8.00 ಲಕ್ಷಕ್ಕಿಂತ ಕಡಿಮೆ ಇರುವ GM ಅಭ್ಯರ್ಥಿಗಳು ತಹಶೀಲ್ದಾರರಿಂದ ನಮೂನೆ-1 ರಲ್ಲಿ RD ನಂಬರ್ ಹೊಂದಿರುವ ಮೇಲುಸ್ತರಕ್ಕೆ ಸೇರಿಲ್ಲದ ಪ್ರಮಾಣ ಪತ್ರ (Non-creamy layer certificate) ಪಡೆದು ಸಲ್ಲಿಸಬೇಕು.
ಪ್ರ.19: SC / ST / ಪ್ರವರ್ಗ-1 ಅಭ್ಯರ್ಥಿಗಳಿಗೆ ಕೆನೆಪದರ ನೀತಿ ಅನ್ವಯಿಸುತ್ತದೆಯೇ?
ಅನ್ವಯಿಸುವುದಿಲ್ಲ. SC, ST ಮತ್ತು ಪ್ರವರ್ಗ-1 ರ ಅಭ್ಯರ್ಥಿಗಳಿಗೆ ಆದಾಯದ ಮಿತಿ ಇರುವುದಿಲ್ಲವಾದ್ದರಿಂದ Creamy layer ನೀತಿ ಅನ್ವಯಿಸುವುದಿಲ್ಲ.
ಪ್ರ.20: ರೂ. 8 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ GM ಅಭ್ಯರ್ಥಿಗಳಿಗೆ ಇತರೆ ಸಮತಲ ಮೀಸಲಾತಿ ಅನ್ವಯಿಸುತ್ತದೆಯೇ?
ಹೌದು, ಗ್ರಾಮೀಣ ಮೀಸಲಾತಿ ಹೊರತುಪಡಿಸಿ ಉಳಿದಂತೆ ಮಾಜಿ ಸೈನಿಕ, ಕನ್ನಡ ಮಾಧ್ಯಮ, ಅಂಗವೈಕಲ್ಯ, ಯೋಜನಾ ನಿರಾಶ್ರಿತ, ತೃತೀಯ ಲಿಂಗಿ ಮೀಸಲಾತಿಗಳನ್ನು ಕೋರಬಹುದು.
ಪ್ರ.21: 1 ರಿಂದ 10 ನೇ ತರಗತಿ ಗ್ರಾಮೀಣದಲ್ಲಿ ಓದಿದ್ದರೂ, ಆದಾಯ 8 ಲಕ್ಷ ಮೀರಿದ್ದರೆ ಮೀಸಲಾತಿ ಸಿಗುವುದೇ?
ಇಲ್ಲ, ಕುಟುಂಬದ ವಾರ್ಷಿಕ ಆದಾಯ ರೂ.8.00 ಲಕ್ಷಕ್ಕಿಂತ ಹೆಚ್ಚಿದ್ದಲ್ಲಿ ಗ್ರಾಮೀಣ ಮೀಸಲಾತಿ ಕೋರಲು ಅವಕಾಶವಿರುವುದಿಲ್ಲ.
೫. ಶೈಕ್ಷಣಿಕ ವಿದ್ಯಾರ್ಹತೆ ಮತ್ತು TET ನಿಯಮಗಳು
ಪ್ರ.22: ಪದವಿಯಲ್ಲಿ ಒಟ್ಟಾರೆ ಶೇ.50 ರಷ್ಟು ಅಂಕಗಳು ಬೇಕೆ ಅಥವಾ ಐಚ್ಛಿಕ ವಿಷಯಗಳಲ್ಲೇ?
ಪದವಿಯಲ್ಲಿ ಒಟ್ಟಾರೆಯಾಗಿ ಸರಾಸರಿ ಶೇ.50 ರಷ್ಟು ಅಂಕಗಳನ್ನು ಹೊಂದಿದ್ದರೆ ಅರ್ಜಿ ಸಲ್ಲಿಸಬಹುದು.
ಪ್ರ.23: PST, GPT ಮತ್ತು AM ಹುದ್ದೆಗಳಿಗೆ ಬೇರೆ ಬೇರೆ ಜಿಲ್ಲೆಗಳಿಗೆ ಅರ್ಜಿ ಸಲ್ಲಿಸಬಹುದೇ?
ಹೌದು, ಅರ್ಹತೆಯಿರುವ ಅಭ್ಯರ್ಥಿಯು ಬೇರೆ ಬೇರೆ ವೃಂದಕ್ಕೆ ಬೇರೆ ಬೇರೆ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬಹುದು (ಒಂದು ವೃಂದಕ್ಕೆ ಒಂದು ಜಿಲ್ಲೆ ಮಾತ್ರ).
ಪ್ರ.24: GPT ಕನ್ನಡ ಹುದ್ದೆಗೆ ಪದವಿಯಲ್ಲಿ ಕನ್ನಡವನ್ನು ಐಚ್ಛಿಕವಾಗಿ ಓದಿರಬೇಕೇ?
ಹೌದು, ಪದವಿಯಲ್ಲಿ ಕನ್ನಡ ಭಾಷೆಯನ್ನು ಐಚ್ಛಿಕ ವಿಷಯವಾಗಿ (Optional) ಮೂರೂ ವರ್ಷಗಳು ಅಧ್ಯಯನ ಮಾಡಿರುವುದು ಕಡ್ಡಾಯವಾಗಿರುತ್ತದೆ.
ಪ್ರ.25: ಕನ್ನಡ ಮಾಧ್ಯಮದಲ್ಲಿ ಪದವಿ ಪಡೆದವರು ಪ್ರೌಢಶಾಲಾ ಕಲಾ/ಜೀವವಿಜ್ಞಾನ (ಆಂಗ್ಲ ಮಾಧ್ಯಮ) ಹುದ್ದೆಗೆ ಅರ್ಹರೇ?
ಇಂಗ್ಲಿಷ್ ಭಾಷೆಯನ್ನು ಪದವಿಯಲ್ಲಿ ಒಂದು ಭಾಷೆಯನ್ನಾಗಿ ಓದಿರಬೇಕು ಅಥವಾ SSLC ಯಲ್ಲಿ ಪ್ರಥಮ/ದ್ವಿತೀಯ ಭಾಷೆಯನ್ನಾಗಿ ಓದಿರಬೇಕು ಅಥವಾ SSLC/ಪದವಿಯನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿರಬೇಕು ಅಥವಾ UGC ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಭಾಷಾ ಡಿಪ್ಲೊಮಾ ಹೊಂದಿರಬೇಕು.
ಪ್ರ.26: ದೈಹಿಕ ಶಿಕ್ಷಣ ಶಿಕ್ಷಕರು (PET Gr-I & Gr-II) ಮತ್ತು ಪ್ರೌಢಶಾಲಾ ಶಿಕ್ಷಕರಿಗೆ (HSTR) TET ಕಡ್ಡಾಯವೇ?
ಇಲ್ಲ, ಪ್ರಾಥಮಿಕ ಶಾಲಾ PET-Grade-II ಹಾಗೂ ಪ್ರೌಢಶಾಲಾ ಸಹಶಿಕ್ಷಕ / PET-Grade-I ಹುದ್ದೆಗೆ TET / CTET ಅಗತ್ಯವಿರುವುದಿಲ್ಲ.
ಪ್ರ.27 & 28: PST ಮತ್ತು GPT ಹುದ್ದೆಗಳಿಗೆ TET ಅರ್ಹತಾ ಅಂಕಗಳು ಎಷ್ಟು?
• PST (1-5): TET/CTET Paper-1 ಕಡ್ಡಾಯ.
• GPT (6-8): TET/CTET Paper-2 ಕಡ್ಡಾಯ.
• ಅರ್ಹತಾ ಅಂಕಗಳು: SC/ST/C-1/PH ಅಭ್ಯರ್ಥಿಗಳಿಗೆ ಶೇ.55% ಹಾಗೂ GM/2A/2B/3A/3B ಅಭ್ಯರ್ಥಿಗಳಿಗೆ ಶೇ.60%.
• GPT (6-8): TET/CTET Paper-2 ಕಡ್ಡಾಯ.
• ಅರ್ಹತಾ ಅಂಕಗಳು: SC/ST/C-1/PH ಅಭ್ಯರ್ಥಿಗಳಿಗೆ ಶೇ.55% ಹಾಗೂ GM/2A/2B/3A/3B ಅಭ್ಯರ್ಥಿಗಳಿಗೆ ಶೇ.60%.
೬. ಸೇವಾನಿರತರು ಮತ್ತು ಇತರೆ ನಿಯಮಗಳು
ಪ್ರ.29 & 33: ಸೇವಾನಿರತ ಅಭ್ಯರ್ಥಿಗಳು ನಿರಾಕ್ಷೇಪಣಾ ಪ್ರಮಾಣ ಪತ್ರ (NOC) ಯಾವಾಗ ಸಲ್ಲಿಸಬೇಕು?
ಅರ್ಜಿ ಸಲ್ಲಿಸುವಾಗ NOC ಅಗತ್ಯವಿಲ್ಲ. 1:2 ಮೂಲ ದಾಖಲೆಗಳ ಪರಿಶೀಲನೆಗೆ ಆಯ್ಕೆಯಾದಾಗ ಸಕ್ಷಮ ಪ್ರಾಧಿಕಾರದಿಂದ ಪಡೆದ NOC ಯನ್ನು ನೇಮಕಾತಿ ಪ್ರಾಧಿಕಾರಕ್ಕೆ ಹಾಜರುಪಡಿಸಬೇಕು.
ಪ್ರ.30: ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ GPT ಶಿಕ್ಷಕರು ಮತ್ತೆ GPT ಹುದ್ದೆಗೆ ಅರ್ಜಿ ಸಲ್ಲಿಸಬಹುದೇ?
ಇಲ್ಲ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಈಗಾಗಲೇ ಕರ್ತವ್ಯ ನಿರ್ವಹಿಸುತ್ತಿರುವ GPT ಶಿಕ್ಷಕರು 2026ನೇ ಸಾಲಿನಲ್ಲಿ ಮತ್ತೊಮ್ಮೆ GPT ಹುದ್ದೆಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಪ್ರ.31 & 32: GPT ಶಿಕ್ಷಕರು ಪ್ರೌಢಶಾಲಾ ಹುದ್ದೆಗೆ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಅರ್ಜಿ ಸಲ್ಲಿಸಬಹುದೇ?
ಹೌದು, GPT ಶಿಕ್ಷಕರು ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಗೆ ಹಾಗೂ ಅನುದಾನಿತ ಶಾಲಾ ಶಿಕ್ಷಕರು ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
ಪ್ರ.34: ವಿವಾಹಿತ ಮಹಿಳೆಯರು ತಂದೆಯ ಹೆಸರಿನ ಯೋಜನಾ ನಿರಾಶ್ರಿತ ಪ್ರಮಾಣ ಪತ್ರ ಸಲ್ಲಿಸಬಹುದೇ?
ಹೌದು ಸಲ್ಲಿಸಬಹುದು. ಆದರೆ ಪ್ರಮಾಣ ಪತ್ರದ ನಮೂನೆಯಲ್ಲಿ ಅಭ್ಯರ್ಥಿಯ ಹೆಸರು ಸ್ಪಷ್ಟವಾಗಿ ನಮೂದಾಗಿರಬೇಕು.
ಇಲಾಖೆಯ ಅಧಿಕೃತ FAQ ಸುತ್ತೋಲೆಯ PDF ಬೇಕೇ?
ಶಾಲಾ ಶಿಕ್ಷಣ ಇಲಾಖೆಯು ಬಿಡುಗಡೆ ಮಾಡಿರುವ ಅಧಿಕೃತ ಪ್ರಶ್ನೋತ್ತರಗಳ ಮೂಲ PDF ಪ್ರತಿಯನ್ನು ಇಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ.
📥 Official FAQs PDF ಡೌನ್‌ಲೋಡ್ ಮಾಡಿ
⚠️ ವಿಶೇಷ ಸೂಚನೆ: ಸದರಿ ಪ್ರಶ್ನೋತ್ತರಗಳು ಕಾಲಕಾಲಕ್ಕೆ ಸರ್ಕಾರದಿಂದ ಹೊರಡಿಸಲಾಗುವ ಅಧಿಕೃತ ಸುತ್ತೋಲೆ, ಆದೇಶ ಹಾಗೂ ಅಧಿಸೂಚನೆಗಳಿಗೆ ಒಳಪಟ್ಟಿರುತ್ತವೆ.
📢 ಈ ಉಪಯುಕ್ತ ಅಧಿಕೃತ ಮಾಹಿತಿಯನ್ನು ನಿಮ್ಮ ಸ್ಪರ್ಧಾತ್ಮಕ ಪರೀಕ್ಷಾ ಆಕಾಂಕ್ಷಿ ಸ್ನೇಹಿತರೊಂದಿಗೆ ತಪ್ಪದೇ ಹಂಚಿಕೊಳ್ಳಿ!
You May Also Like 👇
Loading...
