ಅರಮನೆಯಲ್ಲಿ ಅರಳಿದ ಹೂವಿನ ತೊಳಲಾಟ..ಅರಮನೆಯ ಅಂತಃಪುರದಲ್ಲಿ ಅರಳಿದ ಹೂವೊಂದು,
ವಿಧಿಯ ತೊಳಲಾಟಡದಿ ಬಯಲಿಗೆ ತಾ ಬಂದು,
ನೋವು ನರಳಾಟಗಳ ಸಹಚರದಲಿ ಅದು ಬೆಂದು,
ಪುಟಕ್ಕಿಟ್ಟ ಪ್ರಭೆಯಾಗಿ ಬೆಳಗುತಿದೆ ಕನಸುಂಡು...

ಕನಸೆಂಬ ಕನವರಿಕೆ ಕೈಗೂಡುವ ಶಂಕೆ,
ತಡೆಯುತಿದೆ ಬಾಂಧವ್ಯದ ಅಸೂಯೆಯ ಅಂಕೆ,
ತೆರೆಯುವುದೇ ಭವಿಷ್ಯದ ಭವ್ಯ ಪುಟಗಳ ಕಂತೆ?
ಮುಗಿಯುವುದೇ ಮನದ ಗೂಡಿನ ಭಯಾನಕ ಚಿಂತೆ?

-ಸತ್ಯಪ್ರೀಯ 
Post a Comment (0)
Previous Post Next Post