ಗಿರಿ ಜಿಲ್ಲೆ ಯಾದಗಿರಿಯು ಹೆಸರೇ ಸೂಚಿಸುವಂತೆ ಬೆಟ್ಟ ಗುಡ್ಡಗಳನ್ನು ಹೊಂದಿದ ಪ್ರದೇಶ. ಜಿಲ್ಲೆಯ ಶಹಾಪುರ , ಸುರಪುರ ತಾಲೂಕಿನ ಪ್ರದೇಶಗಳು ವಿಸ್ತಾರವಾದ ಗುಡ್ಡಗಳನ್ನು ಹೊಂದಿವೆ. ಇವುಗಳು ಭಯಂಕರ ಬಂಡೆಗಲ್ಲಿನ ಬೆಟ್ಟ-ಗುಡ್ಡಗಳಾಗಿದ್ದರೂ ಸಹ, ಈ ವರ್ಷ ಮಳೆಯ ಪ್ರಮಾಣ ಎಲ್ಲೆಡೆ ಜಾಸ್ತಿಯಾಗಿರುವುದರಿಂದ ಇಲ್ಲಿನ ಬೆಟ್ಟಗಳು ಹಚ್ಚ ಹಸುರಿನಿಂದ ಕಂಗೊಳಿಸುತ್ತಿವೆ. ಈ ಭಾಗದಲ್ಲಿ ಈ ವರ್ಷ ವರ್ಷಧಾರೆ ಸಾಕಾಗುಷ್ಟು ಸುರಿದ ಪರಿಣಾಮ, ಯಾದಗಿರಿ ಹತ್ತಿರದ ಹತ್ತಿಕುಣಿ ಪ್ರದೇಶದ ಸಮೀಪದ ಕುರುಚಲು ಕಾಡು ಮಲೆನಾಡು ನಾಚುವಂತ ರೀತಿಯಲ್ಲಿ ಹಚ್ಚ ಹಸುರಿನಿಂದ ಮೈದುಂಬಿಕೊಂಡಿದೆ. ನೋಡುವ ಕಣ್ಣುಗಳಿಗೆ ಮುದ ನೀಡುವ ಆ ನಿಸರ್ಗದ ಸೌಂದರ್ಯ ಪ್ರವಾಸಿಗರನ್ನು ಕೈ ಮಾಡಿ ಕರೆಯುತ್ತಿದೆ.
ಬಿಸಿಲು ನಾಡು ಎಂದೇ ಪ್ರಸಿದ್ದಿಯಾದ ಈ ಸಗರ ನಾಡಿನಲ್ಲಿ ಈ ವರ್ಷ ಅಧಿಕ ಮಳೆಯಾಗಿದೆ. ಪರಿಣಾಮ, ಗುಡ್ಡದಲ್ಲಿ ಹೇರಳವಾಗಿ ಸಿಗುವ ಸೀತಾ ಫಲ ಹಣ್ಣುಗಳ ವ್ಯಾಪಾರ ಯದಾಗಿರಿ ಜಿಲ್ಲೆಯಾದ್ಯಂತ ತುಂಬಾ ಜೋರಾಗಿದೆ.
ಈ ಸೀತಾಫಲ ಹಣ್ಣು ವರ್ಷವಿಡೀ ದೊರೆಯುದಿಲ್ಲ. ಈ ಹಣ್ಣು ಸಿಗುವುದು ಪ್ರತಿವರ್ಷ ಮಳೆಗಾಲದ ಕೊನೆಯಲ್ಲಿ. ಸೀತಾಫಲ ಸೇವನೆಯಿಂದ ಆಗುವ ಆರೋಗ್ಯಕರ ಲಾಭಗಳು ಅನೇಕ. ಅದರ ಸಿಹಿ, ಔಷದಿಯುಕ್ತ ಗುಣ ಅರಿತವರು ಈ ಸೀತಾ ಫಲ ಹಣ್ಣುನ್ನು ಇಷ್ಟಪಡುತ್ತಾರೆ. ಇನ್ನೊಂದು ವಿಶೇಷ ಎಂದರೆ, ಇದು ಯಾವುದೇ ಔಷಧಿಯನ್ನು ಸಿಂಪಡಣೆ ಮಾಡದೆ ರಸಗೊಬ್ಬರ ಬಳಸದೆ ನೈಸರ್ಗಿಕವಾಗಿಯೇ ಬೆಳೆಯುವುದು.
ಸೀತಫಾಲ ಸೇವನೆಯ ಪ್ರಯೋಜನಗಳು:
- ಅತಿ ಹೆಚ್ಜು ಬೀಜಗಳಿಂದ ಕುಡಿದ ಸೀತಾ ಫಲ ಹಣ್ಣು ತಿನ್ನುತ್ತಿದ್ದರೆ ಬಾಯಿಗೆ ವ್ಯಾಯಾಮ ಆದಂತಾಗುತ್ತದೆ. ನಿಯಮಿತವಾಗಿ ಈ ಹಣ್ಣು ಸೇವಿಸುವದರಿಂದ ಅಲ್ಸರ ನಂತಹ ಕಾಯಲೆಗಳು ವಾಸಿಯಾಗುತ್ತವೆ.
- ಗ್ಯಾಸ ಅಸಿಡಿಟಿ , ಮಲಬದ್ಧತೆ ಯಂತಹ ಜೀರ್ಣ ಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.
- ಬೆಳೆಯುವ ಮಕ್ಕಳಿಗೆ ನಿತ್ತ್ಯಾ ಸೀತಾಫಲ ಹಣ್ಣು ತಿನ್ನಿಸುವದರಿಂದ ಕ್ಯಾಲ್ಸಿಯಂ ನಂತಹ ಪೋಷಕಾಂಶಗಳು ದೊರೆಯುತ್ತವೆ. ಇದರಿಂದ ಮಕ್ಕಳ ಮೂಳೆಗಳು ಗಟ್ಟಿಯಾಗಿರುತ್ತವೆ.
- ಸೀತಾ ಫಲದಲ್ಲಿರುವ ಕ್ಯಾಲ್ಶಿಯಂ ಅಂಶವು ಹೃದಯಾಘಾತದಿಂದ ರಕ್ಷಿಸಲು ಸಹಕಾರಿಯಾಗಿದೆ.
- ಅಲ್ಲದೆ ಮಧುಮೇಹಕ್ಕಾಗಿ ಸೀತಾ ಫಲ ಹಣ್ಣು ಬಹಳ ಪ್ರಯೋಜನ ಕಾರಿಯಾಗಿದೆ ಎಂದು ಹೇಳುತ್ತಾರೆ.
- ಹಾಗೆ ಸೀತಾ ಫಲದ ಎಲೆಗಳನ್ನು ಸಣ್ಣಗೆ ಅಗೆದು ಗಾಯಗಳ ಮೇಲೆ ಲೇಪಿಸಿದರೆ ಚರ್ಮರೋಗಗಳನ್ನು ವಾಸಿಮಾಡುವ ಔಷಧಿಯ ಗುಣವನ್ನು ಇದು ಹೊಂದಿದೆ.
- ದೇಹದಲ್ಲಿ ರಕ್ತದ ಪ್ರಮಾಣ ಕಡಿಮೆ ಇದ್ದವರು ಹಣ್ಣು ತಿನ್ನುವುದರಿಂದ ಕ್ರಮೇಣ ರಕ್ತದ ಉತ್ಪತ್ತಿಯಾಗುತ್ತದೆ.
ಇಷ್ಟೇ ಅಲ್ಲದೆ, ಇನ್ನೂ ಹತ್ತು-ಹಲವು ಪ್ರಯೋಜನಗಳು ಈ ಸೀತಫಾಲ ಹಣ್ಣಿನಿಂದ ನಮಗೆ ದೊರೆಯುತ್ತವೆ..
ಲೇಖಕರು:
ಮಹಾತ್ಮಾ ಗಾಂಧಿ ಪ್ರೌಢಶಾಲೆ, ಚಿತ್ತಾಪುರ