ಇಂಗ್ಲೀಷ್ ನಲಿಕಲಿಯ ಒಂದು ಅವಲೋಕನ

Overview of English Nalikali -Egnana

ಇಂಗ್ಲೀಷ್ ನ್ನು ಒಂದು ಅನ್ಯ ದೇಶೀಯ ಭಾಷೆಯಾಗಿ ಕಲಿಸುವುದು

ನಿಮಗೆಲ್ಲಾ ಈಗಾಗಲೇ ತಿಳಿದಂತೆ ಮಕ್ಕಳಿಗೆ ಭಾಷೆಯೊಂದಿಗಿನ ತೆರೆದುಕೊಳ್ಳುವಿಕೆ ಒಂದೇ ತೆರನಾಗಿರುವುದಿಲ್ಲ. ಅಂದರೆ ಮಕ್ಕಳು ಬೇರೆ ಬೇರೆ ಭಾಷೆಗಳಿಗೆ ಬೇರೆ ಬೇರೆ ವಿಧಗಳಲ್ಲಿ ತೆರೆದುಕೊಂಡಿರುತ್ತಾರೆ. ಇದನ್ನು ಉದಾಹರಣೆಯೊಂದಿಗೆ ಚರ್ಚಿಸೋಣ. ಮಕ್ಕಳು ತಮ್ಮ ಮನೆಯಲ್ಲಿ ಮಾತನಾಡುವ ಭಾಷೆ, ನೆರೆಹೊರೆಯಲ್ಲಿ, ಸುತ್ತಲಿನವರೊಂದಿಗೆ ಮಾತನಾಡುವ ಭಾಷೆ ಅವರ ಮಾತೃಭಾಷೆ, ಮನೆಭಾಷೆ ಅಥವಾ ಸ್ಥಳೀಯ ಭಾಷೆಯಾಗಿರುತ್ತದೆ.

ಉದಾ: ನಮ್ಮ ಶಾಲೆಗೆ ಬರುವ ಮಗು ಮನೆಯಲ್ಲಿ ಮತ್ತು ನೆರೆಹೊರೆಯಲ್ಲಿ ಬಳಸುವ ಭಾಷೆ ಕನ್ನಡವಾಗಿದ್ದರೆ, ಅದು ಅವರ ಮಾತ್ರುಭಾಷೆಯಾಗಿರುತ್ತದೆ. ಇದು ಅವರ ಹೋಂ ಲ್ಯಾಂಗ್ವೇಜ್ ಅಥವಾ ನೇಟಿವ್ ಲ್ಯಾಂಗ್ವೇಜ್ ಎನಿಸಿಕೊಳ್ಳುತ್ತದೆ.

ಉದಾ: ಒಡಿಸಿ ಕುಟುಂಬದ ಮಗುವೊಂದು ನಮ್ಮ ಶಾಲೆಗೆ ಕಲಿಯಲು ಬರುತ್ತಿದೆ ಎಂದರೆ, ಅದು ಮನೆಯಲ್ಲಿ ಒಡಿಸಿ ಭಾಷೆಯನ್ನು ಮಾತನಾಡುತ್ತಿರುತ್ತದೆ ಹಾಗೂ ನೆರೆಹೊರೆಯಲ್ಲಿ ಮತ್ತು ಶಾಲೆಯಲ್ಲಿ ಕನ್ನಡ ಭಾಷೆಯನ್ನು ಆಲಿಸುತ್ತಿರುತ್ತದೆ. ಹಾಗಾಗಿ ಕನ್ನಡ ಆ ಮಗುವಿನ ದ್ವಿತೀಯ ಭಾಷೆಯಾಗಿರುತ್ತದೆ.

ನಮ್ಮ ಸರ್ಕಾರಿ ಶಾಲೆಗಳ ಬಹುಪಾಲು ಮಕ್ಕಳಿಗೆ ಮನೆಯಲ್ಲಿ, ನೆರೆಹೊರೆಯಲ್ಲಿ ಇಂಗ್ಲೀಷ್ ಕೇಳಲು ಅಥವಾ ಮಾತನಾಡಲು ಯಾವುದೇ ಅವಕಾಶವಿರುವುದಿಲ್ಲ, ಅಂದರೆ ಅವರು ಅದನ್ನು ಕೇವಲ ತರಗತಿಯಲ್ಲಿ ಮಾತ್ರ ಕೇಳಲು ಸಾಧ್ಯ. ಆದ್ದರಿಂದ ಇಂಗ್ಲೀಷ್ ಅವರಿಗೆ ಪರಭಾಷೆ ಅಥವಾ ಫಾರಿನ್ ಲ್ಯಾಂಗ್ವೇಜ್ ಆಗಿರುತ್ತದೆ.

ಮಕ್ಕಳು ಶಾಲೆಗೆ ಸೇರುವ ಮೊದಲೇ ತಮ್ಮ ಮಾತೃಭಾಷೆಯ ಮೂಲಭೂತ ಪದಸಂಪತ್ತು ಮತ್ತು ವ್ಯಾಕರಣದ ಅರಿವಿರುತ್ತದೆ. ಹಾಗಾಗಿ ಮಾತೃಭಾಷೆಯನ್ನು ಕಲಿಸುವಾಗ ಓದುವ ಹಾಗು ಬರೆಯುವ ಕೌಶಲಗಳ ಕಲಿಕೆಗಳ ಕಡೆಗೆ ಹೆಚ್ಚು ಒತ್ತನ್ನು ನೀಡಲಾಗುತ್ತದೆ. ಹಾಗಾಗಿಯೇ ನಲಿ-ಕಲಿಯಲ್ಲಿನ ಕನ್ನಡ ಭಾಷಾ ಕಲಿಕೆಯಲ್ಲಿ ಓದುವಿಕೆ ಮತ್ತು ಬರೆಯುವಿಕೆ ಹೆಚ್ಚಿನ ಗಮನವನ್ನು ನೀಡಲಾಗಿದೆ.

ಆದರೆ, ಮಕ್ಕಳಿಗೆ ಪರಭಾಷೆಯನ್ನು ಕಲಿಸುವಾಗ ಅವರ ಪದಸಂಪತ್ತು ಮತ್ತು ವ್ಯಾಕರಣದ ಅರಿವು ಶೂನ್ಯವಾಗಿರುತ್ತದೆ. ಆದ್ದರಿಂದ ಪರಭಾಷೆಯನ್ನು ಕಲಿಸುವಾಗ ಓದು ಮತ್ತು ಬರಹಗಳಷ್ಟೇ ಅಲ್ಲದೆ ಮೂಲಭೂತ ಪದ ಸಂಪತ್ತು ಮತ್ತು ವ್ಯಾಕರಣವನ್ನು ಕಲಿಸಬೇಕಾಗುತ್ತದೆ.

ಹಾಗಾಗಿ ನಲಿಕಲಿ ಇಂಗ್ಲೀಷ್ ಭಾಷೆಯನ್ನೂ ಕಲಿಸುವಾಗ ಓದು-ಬರಹ, ಆಲಿಸುವಿಕೆ ಅಂಟ್ಟು ಮಾತನಾದುವಿಕೆಗೆ ಸಮಾನ ಆದ್ಯತೆಯನ್ನು ನೀಡಲಾಗಿದೆ.


ಇಂಗ್ಲೀಷ್ ನಲಿಕಲಿಯ ವಿಧಾನ

ನಲಿಕಲಿ ಇಂಗ್ಲೀಷ್ ಭಾಷಾ ಬೋಧನಾ ಕ್ರಮವು ನಾಲ್ಕು ವಿಶಾಲ ಕಲಿಕಾ ಫಲಗಳನ್ನು ಹೊಂದಿದೆ, ಅವುಗಳು:
೧. ಆಲಿಸುವುದು ಮತ್ತು ಅರ್ಥೈಸಿಕೊಳ್ಳುವುದು 
೨. ಸರಿಯಾಗಿ ಮಾತನಾಡುವುದು
೩. ಅರ್ಥವತ್ತಾಗಿ ಓದುವುದು
೪. ಬರಹದ ಮೂಲಕ ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸುವುದು

ಮಕ್ಕಳು ನಲಿಕಲಿ ಇಂಗ್ಲೀಷ್ ತರಗತಿಯಲ್ಲಿ ಸುಮ್ಮನೆ ಕುಳಿತು ಕೇಳಿಸಿಕೊಳ್ಳುವ ಬದಲು ಅವರು ತಮ್ಮ ಸಹಪಾಠಿಗಳೊಂದಿಗೆ ಮತ್ತು ಶಿಕ್ಷಕರೊಂದಿಗೆ ಮಾತನಾಡುತ್ತಾ ಕಲಿಯುದರಲ್ಲಿ ನಿರತರಾಗಿರುತ್ತಾರೆ. ಅಂದರೆ, passive learners ಆಗಿರದೆ active learners ಕೂಡ ಆಗಿರುತ್ತಾರೆ.

ಒಂದು ಪರಭಾಷೆಯನ್ನು ಕಲಿಸುವಾಗ ನಮ್ಮ ಗಮನ ಪದಸಂಪತ್ತನ್ನು ಹೆಚ್ಚಿಸುವುದಾಗಿರುತ್ತದೆ, ಅಂದರೆ ಈ ಭಾಷೆಯನ್ನು ಆಲಿಸುವುದು, ನೆನಪಿಸಿಕೊಳ್ಳುವುದು, ಅರ್ಥೈಸಿಕೊಳ್ಳುವುದು ಹಾಗೂ ಮಾತನಾಡುವುದರ ಮೂಲಕ ಅಭಿವ್ರುದ್ಧಿಪದಿಸಬೇಕಾಗುತ್ತದೆ.

ನಿಮಗೆಲ್ಲಾ ಗೊತ್ತಿರುವ ಹಾಗೆ ಮಕ್ಕಳು ಈಗಾಗಲೇ ಗೊತ್ತಿರುವ ವಿಷಯ ಅಥವಾ ಪರಿಕಲ್ಪನೆಯನ್ನು ಇನ್ನೊಮ್ಮೆ ತಿಳಿಸಿದರೆ ಚೆನ್ನಾಗಿ ಅರ್ಥೈಸಿಕೊಳ್ಳುತ್ತಾರೆ. ಹಾಗಾಗಿ ಪರಭಾಷೆಯನ್ನು ಕಲಿಸುವಾಗ ಮಕ್ಕಳಿಗೆ ಸ್ವಂತ ಭಾಷೆಯಲ್ಲಿ ಕಲಿತಿರುವ/ಗೊತ್ತಿರುವ ಪದಸಂಪತ್ತನ್ನೇ ಮೊದಲು ಪರಿಚಯಿಸುವುದು ಅತಿ ಮುಖ್ಯವಾಗುತ್ತದೆ.

ಇದನ್ನು ಗಮನದಲ್ಲಿರಿಸಿಕೊಂಡೇ ಇಂಗ್ಲೀಷ್ ಪಾಠಕ್ರಮವು ಪರಿಸರ ಅಧ್ಯಯನದ ಪಾಠಕ್ರಮದೊಂದಿಗೆ ಸಮಾನಾಂತರವಾಗಿ ಸಾಗುತ್ತದೆ. ಅಂದರೆ, ಪರಿಸರ ಅಧ್ಯಯನದಲ್ಲಿ ಕಲಿಸಿರುವ ಮತ್ತು ಚರ್ಚಿಸಲ್ಪಟ್ಟಿರುವ ಪದಗಳು ಹಾಗೂ ಪರಿಕಲ್ಪನೆಗಳನ್ನು ಇಂಗ್ಲೀಷ್ ಭಾಷೆಯಲ್ಲಿ ವಿವರಿಸಲಾಗಿದೆ. ಆದ್ದರಿಂದ ಮಕ್ಕಳು ಪರಭಾಷೆಯಲ್ಲಿ ಬರುವ ಪದಗಳು ಹಾಗೂ ಪರಿಕಲ್ಪನೆಗಳೊಂದಿಗೆ ಸಂಬಂಧೀಕರಿಸಿಕೊಳ್ಳುತ್ತಾರೆ.

ಇಲ್ಲಿ ಇಂಗ್ಲೀಷ್ ನ್ನು ಎರಡು ಪತ್ಯೇಕ ಅವಧಿಗಳಲ್ಲಿ ಕಲಿಸಲಾಗುತ್ತದೆ. ಒಂದು ಅವಧಿಯಲ್ಲಿ ಆಲಿಸುವುದು ಮತ್ತು ಮಾತನಾಡುವುದನ್ನು ಕಲಿಸಿದರೆ, ಇನ್ನೊಂದು ಅವಧಿಯಲ್ಲಿ ಓದುವುದು ಮತ್ತು ಬರೆಯುವುದನ್ನು ಕಲಿಸಲಾಗುತ್ತದೆ.

ಅಂತಿಮವಾಗಿ ಇವೆರಡು ಅವಧಿಗಳು ವಿಸ್ತೃತ ಓದಿನತ್ತ ಗಮನ ಹರಿಸುತ್ತದೆ. ಅಂದರೆ increased reading ನತ್ತ focus ಮಾಡುತ್ತದೆ.

ನಿಮಗೆಲ್ಲಾ ತಿಳಿದಿರುವ ಹಾಗೆ ಇಂಗ್ಲೀಷ್ ನಲಿಕಲಿಯು ಬಹುವರ್ಗ ಬೋಧನೆಗೆ ವಿನ್ಯಾಸಗೊಳಿಸಿದ್ದು, ತರಗತಿ ನಿರ್ವಹಣೆಗೆ ಸಂಬಂಧಿಸಿದಂತೆ, oral curriculum ನ್ನು ಮೂರು ವರ್ಷಗಳ continuum ನಲ್ಲಿ ಜೋಡಣೆಗೊಂಡಿದೆ. ಪ್ರತಿ ಚಟುವಟಿಕೆಯನ್ನು graded manner ಅಥವಾ ಶ್ರೇಣಿಕೃತ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

Post a Comment (0)
Previous Post Next Post