ಜೇನು ಶುದ್ಧವೋ? ಅಶುದ್ಧವೋ?

ಜೇನು ಶುದ್ಧವೋ? ಅಶುದ್ಧವೋ?

ಜೇನು ಶುದ್ಧವೋ? ಅಶುದ್ಧವೋ?

ನೀವು ಕೊಂಡುಕೊಂಡ ಜೇನು ತುಪ್ಪವು ಶುದ್ಧವೋ ಅಥವಾ ಅಶುದ್ಧವೋ ಎಂಬುದನ್ನು ಹೇಗೆ ಎಂಬುದನ್ನು ಈ ಪ್ರಯೋಗದಲ್ಲಿ ತಿಲಿಯುವಿರಿ.

ಈ ಪ್ರಯೋಗವು 4ನೇ ತರಗತಿಯ ವಿದ್ಯಾರ್ಥಿಗಳಿಗೆ ಸೂಕ್ತವಾದುದು, ಮತ್ತು ಇದನ್ನು ತರಗತಿಯಲ್ಲಿ ಮಾಡಿ ತೋರಿಸಬಹುದಾಗಿದೆ.

ಉದ್ದೇಶ :

ನಾವು ಉಪಯೋಗಿಸುವ ಜೇನು ಶುದ್ಧವೋ ಅಲ್ಲವೋ ಎಂಬುದನ್ನು ಕಂಡು ಹಿಡಿಯುವುದು.

ಅಗತ್ಯ ಸಾಮಗ್ರಿಗಳು :

  • ಜೇನು ತುಪ್ಪ
  • ಚಮಚ
  • ಗಾಜಿನ ಲೊಟ
  • ನೀರು

ವಿಧಾನ :

ಒಂದು ಗಾಜಿನ ಲೊಟವನ್ನು ತೆಗೆದುಕೊಳ್ಳಿ. ಅದರಲ್ಲಿ ಮುಕ್ಕಲು ಭಾಗದಷ್ಟು ನೀರನ್ನು ಹಾಕಿ. ಒಂದು ಟೇಬಲ್ ಸ್ಪೂನ್(ಚಮಚ)ದ ತುಂಬ ಜೇನು ತುಪ್ಪವನ್ನು ತೆಗೆದುಕೊಳ್ಳಿ. ಅದನ್ನು ಗಾಜಿನ ಲೊಟದಲ್ಲಿರುವ ನೀರಿಗೆ ಹಾಕಿ.

ಈಗ ನೀವು ಜೇನು ತುಪ್ಪವನ್ನು ಲೋಟದಲ್ಲಿರುವ ನೀರಿಗೆ ಹಾಕಿದಾಗ ಏನಾಗುತ್ತದೆ ಎಂಬುದನ್ನು ಗಮನಿಸಿ.

ಈ ಪ್ರಯೋಗವನ್ನು ಕೆಳಗಿನ ವೀಡಿಯೊದಲ್ಲಿ ನೋಡಿ ಇನ್ನಷ್ಟು ತಿಳಿಯಿರಿ:



ತೀರ್ಮಾನ:

  • ನೀವು ಜೇನು ತುಪ್ಪವನ್ನು ಗಾಜಿನ ಲೋಟದೊಳಕ್ಕೆ ಹಾಕಿದಾಗ ಅದು ಲೋಟದ ತಳಭಾಗಕ್ಕೆ ಹೋಗಿ ಎಳೆ ಎಳೆಯಾಗಿ ತಳಭಾಗದಲ್ಲಿ ಸಂಗ್ರಹಗೊಂಡು ನಿಧಾನವಾಗಿ ಬೆರೆತರೆ ಅದು ಶುದ್ಧವಾಧ ಜೇನುತುಪ್ಪ.

  • ಒಂದು ವೇಳೆ ಅದು ಲೊಟದ ತಳಭಾಗಕ್ಕೆ ಹೋಗುವ ಮೊದಲೇ ನೀರಿನಲ್ಲಿ ಕರಗಿದರೆ ಅದು ಶುದ್ಧವಾದ ಜೇನು ತುಪ್ಪವಲ್ಲ.

You May Also Like 👇

Loading...
Post a Comment (0)
Previous Post Next Post