2023-24 ನೇ ಸಾಲಿನ ನಲಿ-ಕಲಿ ಯಲ್ಲಿನ ಬದಲಾವಣೆಗಳು

2023-24 ನೇ ಸಾಲಿನ ನಲಿ-ಕಲಿ ಯಲ್ಲಿನ ಬದಲಾವಣೆಗಳು

2023-24 ನೇ ಸಾಲಿನ ನಲಿ-ಕಲಿ ಯಲ್ಲಿನ ಬದಲಾವಣೆಗಳು:

1) ಕಳೆದ ವರ್ಷ 1,2,3 ನೇ ತರಗತಿಗಳಿಗೆ ಇದ್ದ ವಿದ್ಯಾ ಪ್ರವೇಶ ಈ ವರ್ಷ 1 ನೇ ತರಗತಿಗೆ ಮಾತ್ರ ಇದೆ.

2) ಕಳೆದ ವರ್ಷ 72 ದಿನಗಳ ವಿದ್ಯಾ ಪ್ರವೇಶ ಈ ವರ್ಷ 40 ದಿನಗಳು ಮಾತ್ರ (1-6-23 ರಿಂದ 18-7-23 ರ ವರೆಗೆ).

3) 8 ಕಲಿಕಾ ಮೂಲೆಗಳ ಬದಲಿಗೆ 4 ಕಲಿಕಾ ಮೂಳೆಗಳು:
     1 ಗಣಿತ ಮತ್ತು ವಿಜ್ಞಾನ / ಅನ್ವೇಷಣಾ ಮೂಲೆ 
     2 ಗೊಂಬೆ ಮತ್ತು ಬಿಲ್ಡಿಂಗ್ ಬಾಕ್ಸ್ ಮೂಲೆ 
     3 ಬರೆಯುವ ಮತ್ತು ಓದುವ ಮೂಲೆ 
     4 ಆಟಿಕೆ / ಮಾಡಿ ಕಲಿ / ಕಲೆಗೊಂದು ನೆಲೆ / ಕರಕುಶಲ ಮೂಲೆ.

4) 2 & 3 ನೇ ತರಗತಿಗಳಿಗೆ 40 ದಿನಗಳ ಸೇತುಬಂಧ ಸಹಿತ ಆಯಾಯ ತರಗತಿಯ ಆರಂಭಿಕ ಕಲಿಕೆ

5) ನಲಿ ಕಲಿ ಎರಡನೇ ತರಗತಿ ಮಕ್ಕಳಿಗೆ ಜುಲೈ ಅಂತ್ಯಕ್ಕೆ ಗುಣಿತಾಕ್ಷರ ಮತ್ತು ಒತ್ತಕ್ಷರಗಳ ಕಲಿಕೆ ಆಗಬೇಕು.

6) ಕಳೆದ ವರ್ಷ ಸಾಮೂಹಿಕ ಸಹಿತ ಐದು ಕಲಿಕಾ ತಟ್ಟೆಗಳ ಬದಲಿಗೆ ಈ ವರ್ಷ ಸಾಮೂಹಿಕ ಸಹಿತ ಮೂರು ಕಲಿಕಾ ತಟ್ಟೆಗಳಾಗಿವೆ:
          1 ಕಲಿಕಾಂಶ ತಟ್ಟೆ (ಗುಂಪು)
          2 ಅಭ್ಯಾಸ /ಬಳಕೆ ತಟ್ಟೆ (ಗುಂಪು)
          3 ಮೌಲ್ಯಮಾಪನ ತಟ್ಟೆ (ಗುಂಪು)

7) ಒಂದು ಎರಡು ಮೂರನೇ ತರಗತಿಗಳ ಎಲ್ಲ ವಿಷಯಗಳಿಗೂ 10 ಮೈಲುಗಲ್ಲು ಕಲಿಕೆಯನ್ನು ನಿಗದಿಪಡಿಸಲಾಗಿದೆ.

8) 1 & 2 ನೇ ತರಗತಿ ಪರಿಸರ ಅಧ್ಯಯನ ಸಿರ್ಷಿಕೆ ಬದಲಾಗಿ ಆರೋಗ್ಯ ಮತ್ತು ಪರಿಸರ ಎಂದು ಆಗಿದೆ.

9) FA1, FA2, SA1, FA3, FA4, SA2 ಮೌಲ್ಯಮಾಪನಗಳಿಗೆ ಪ್ರಶ್ನೆ ಪತ್ರಿಕೆ ರಚಿಸಿಕೊಳ್ಳುವುದು.

10) ಕಾರ್ಡ್ ಸಂಖ್ಯೆಗಳಲ್ಲಿ ಬದಲಾವಣೆಗಳಾಗಿವೆ.

11) ಲೋಗೋಗಳಲ್ಲಿ ಬದಲಾವಣೆಗಳಾಗಿವೆ.
Post a Comment (0)
Previous Post Next Post