ಇಸ್ರೇಲ್ ಎನ್ನುವ ಈ ಪುಟ್ಟ ದೇಶ ಅದೆಷ್ಟು ಪವರ್ ಫುಲ್ ಮತ್ತು ಸ್ಪೂರ್ತಿದಾಯಕ ನೀವೇ ನೋಡಿ..!

ಇಸ್ರೇಲ್ ಎನ್ನುವ ಪದ ಎಷ್ಟು ಪವರ್ ಫುಲ್ ಅಂತ ಹಲವು ಸರ್ತಿ ಅನ್ನಿಸಿದೆ. ಜಗತ್ತಿನಲ್ಲಿ ಇರುವ ನೂರಾರು ದೇಶಗಳಲ್ಲಿ ಇಸ್ರೇಲ್ ಒಂದು, ಆದರೆ ನೂರರಲ್ಲಿ ಒಂದಾಗದೆ ಉಳಿದದ್ದು ಜಗತ್ತಿನಲ್ಲಿ ಅದಕ್ಕೆ ಆ ಮಟ್ಟದ ಕೀರ್ತಿ ತಂದು ಕೊಟ್ಟಿದೆ ಅನ್ನಬಹುದು. ಇಸ್ರೇಲ್ ಅಂದಾಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿನಲ್ಲಿ ನೆನಪು ಬರುವುದು ಪ್ಯಾಲೇಸ್ತೀನ್ ನವರು ಮಾಡುವ ಒಂದು ದಾಳಿಗೆ ಉತ್ತರವಾಗಿ ಇವರು ಮಾಡುವ ಎರಡು ಅಥವಾ ಮೂರು ಮರು ದಾಳಿಗಳು.

ಇಸ್ರೇಲ್ ಎನ್ನುವ ಈ ಪುಟ್ಟ ದೇಶ ಅದೆಷ್ಟು ಪವರ್ ಫುಲ್ ಮತ್ತು ಸ್ಪೂರ್ತಿದಾಯಕ ನೀವೇ ನೋಡಿ..!


ಇಸ್ರೇಲಿಗಳು ತಮ್ಮ ಮೇಲೆ ಆದ ಆಕ್ರಮಣಕ್ಕೆ ಹುಲುಬುತ್ತಾ ಅಥವಾ ಶೋಕ ಆಚರಿಸುತ್ತಾ ಕೂರುವ ಜಾಯಮಾನದವರಲ್ಲ. ದಾಳಿಗೆ ವಿರುದ್ಧವಾಗಿ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿ ಮಾಡುವ ದಾಳಿ ಮಾಡುವುದು ಜಗತ್ತಿಗೆ ಇಸ್ರೇಲ್ ಬಗ್ಗೆ ತಿಳಿದಿರುವ ಅತಿ ಸಾಮಾನ್ಯ ವಿಷಯ . ಇಸ್ರೇಲ್ ತನ್ನ ಸುತ್ತ ಇರುವ ದೇಶಗಳೊಂದಿಗೆ ಒಳ್ಳೆಯ ಸಂಬಂಧ ಹೊಂದಿಲ್ಲ. ಇಸ್ರೇಲ್ ಸುತ್ತಾ ಲೆಬನಾನ್, ಸಿರಿಯಾ, ಸೌದಿ ಅರೇಬಿಯಾ, ಪ್ಯಾಲೇಸ್ತೀನ್, ಜೋರ್ಡನ್, ಈಜಿಪ್ಟ್ ದೇಶಗಳನ್ನ ಹೊಂದಿದೆ. ಇವೆಲ್ಲಾ ಮುಸ್ಲಿಂ ದೇಶಗಳು. ಈ ಎಲ್ಲಾ ದೇಶಗಳಿಗೂ ಇಸ್ರೇಲ್ ಎಂದರೆ ರಕ್ತ ಕುದಿಯುತ್ತದೆ. ಅದಕ್ಕೆ ಕಾರಣ ಇಸ್ರೇಲ್ ಇರುವ ಜಾಗ ನಮ್ಮದು ಇಸ್ರೇಲ್ ಗೆ ಸೇರಿದ್ದೇ ಅಲ್ಲ ಎನ್ನುವುದು ಬಹಳ ಹಳೆಯ ವಾದ. ಹೀಗಾಗಿ ಇಸ್ರೇಲ್ ಸದಾ ಎಚ್ಚರದಿಂದ ಇರಬೇಕಾದ ಪರಿಸ್ಥಿತಿಯಲ್ಲಿದೆ. 

ಸದಾ ಒಂದಲ್ಲ ಒಂದು ಆಕ್ರಮಣಗಳಿಗೆ ಇಸ್ರೇಲ್ ಗುರಿಯಾಗುತ್ತಲೇ ಇರುತ್ತದೆ. ಇಸ್ರೇಲ್ ಗೆ ನೀವು ಭೇಟಿ ಕೊಟ್ಟಿದ್ದೆ ಆದರೆ ಅಲ್ಲಿ ಅಘೋಷಿತ ಯುದ್ಧದ ಪರಿಸರ ಇರುವುದು ನಿಮ್ಮ ಅರಿವಿಗೆ ಬಂದಿತು . ಹಾಗೆಂದು ಜನ ಭಯಭೀತರಾಗಿದ್ದಾರೆ ಎಂದುಕೊಂಡರೆ ಅದು ತಪ್ಪು . ಜನ ಸಾಮಾನ್ಯ ರೀತಿಯಲ್ಲಿ ತಮ್ಮ ಜೀವನ ನೆಡೆಸುತ್ತಾ ಇರುತ್ತಾರೆ. ಜೋರಾಗಿ ಸೈರನ್ ಕೂಗುತ್ತದೆ. ಆ ಸೈರನ್ ಯುದ್ಧದ ಅಥವಾ ಆಪತ್ತು ಎನ್ನುವ ಸಂಕೇತ. ಜನ ಇಂತಹ ಸೈರನ್ ಗೆ ಹೊಂದಿಕೊಂಡಿದ್ದಾರೆ. ಅಲ್ಲಿ ಪ್ಯಾನಿಕ್ ಅನ್ನುವುದು ಇಲ್ಲ ನಿಮ್ಮ ಪಕ್ಕದಲ್ಲಿ ಬೀಚ್ ನಲ್ಲಿ ಮಲಗಿದ್ದ ಪುರುಷ ಅಥವಾ ಮಹಿಳೆ ಕೆಲವು ನಿಮಿಷಗಳಲ್ಲಿ ಸೈನಿಕರಾಗಿ ಬದಲಾಗುತ್ತಾರೆ. ಪ್ರವಾಸಿಗನಿಗೆ ಕೀಪ್ ಯುವರ್ ಕೂಲ್ ಎಲ್ಲಾ ಕಂಟ್ರೋಲ್ ನಲ್ಲಿದೆ ಎನ್ನುವ ತಣ್ಣನೆಯ ಭಾವನೆ ನೀಡುತ್ತಾರೆ. ಮುಂದಿನ ಕತೆ, ಇಸ್ರೇಲಿಗಳು ನೀಡುವ ಖಡಕ್ ಉತ್ತರ ಜಗತ್ತಿಗೆ ತಿಳಿದಿದೆ. ಇಷ್ಟೆ ಆಗಿದ್ದರೆ ಇಸ್ರೇಲ್ ವಿಶೇಷ ಅನ್ನಿಸುತ್ತಾ ಇರಲಿಲ್ಲ ಜಗತ್ತಿಗೆ ಒಂದು ದಾರಿಯಾದರೆ ಇಸ್ರೇಲಿಗಳು ಮಾತ್ರ ತಮ್ಮದೆ ದಾರಿಯಲ್ಲಿ ತಮ್ಮದೆ ವೇಗದಲ್ಲಿ ಸಾಗುತ್ತಾರೆ. ಏನದು ಅಂತಹ ವೈಶಿಷ್ಟ್ಯಗಳು ಎನ್ನುವುದರ ಸುತ್ತ ಒಂದು ರೌಂಡ್ ಹಾಕೋಣ ಬನ್ನಿ. 

ಇಸ್ರೇಲ್ ಸಾಧನೆಯ ಹಾದಿಯನ್ನ ಮುಖ್ಯ ಮಜಲುಗಳನ್ನ ತಿಳಿದರೆ ಇಸ್ರೇಲ್ ಎಂದರೆ ಜಗತ್ತು ಏಕೆ ವಿಶೇಷ ರೀತಿಯಲ್ಲಿ ನೋಡುತ್ತದೆ ಎನ್ನವುದ ತಿಳಿಯಬಹದು. 

ಮೊದಲನೆ ಮಹಾಯುದ್ಧಕ್ಕೆ ಮುಂಚೆ:   

ಯಹೂದಿಗಳು ಅತ್ಯಂತ ಸಣ್ಣ ಜನಾಂಗ. ಇವರ ಉಳಿವಿಗಾಗಿ ವಿದೇಶಗಳಿಂದ ಕಳಿಸುತ್ತಿದ್ದ ದೇಣಿಗೆ ಹಣದಿಂದ ಇಸ್ರೇಲಿ ಯಹೂದಿಗಳು ಜೀವನ ಸಾಗುತಿತ್ತು. ಇಸ್ರೇಲ್ ಇನ್ನೂ ಹುಟ್ಟಿರಲಿಲ್ಲ , ಹೇಳಿಕೊಳ್ಳುವಂತ ಯಾವುದೇ ರೀತಿಯ ಹೂಡಿಕೆ ಇವರಿಂದ ಬಂದಿರಲಿಲ್ಲ. ೧೯ ನೇ ಶತಮಾನದಲ್ಲಿ ರೋತ್ಸ್ ಚೈಲ್ಡ್ ವೈನ್ ತಯಾರಿಕೆಯಲ್ಲಿ ಮತ್ತು ರೈಲು ಉದ್ದಿಮೆಯಲ್ಲಿ ಪ್ರಥಮ ಬಾರಿಗೆ ಹಣ ಹೂಡಿಕೆ ಮಾಡುತ್ತದೆ. ಆದರೆ ಅದರಿಂದ ಹೆಚ್ಚಿನ ಯಶಸ್ಸು ಹಣವನ್ನ ಗಳಿಸುವುದಿಲ್ಲ. ಹೀಗಾಗಿ ಪ್ರಥಮ ಮಹಾಯುದ್ಧಕ್ಕೆ ಮುಂಚೆ ಇಸ್ರೇಲ್ ಮತ್ತು ಯಹೂದಿಗಳು ಎನ್ನುವ ಪದಗಳು ಇನ್ನೂ ಶೈಶವಾಸ್ಥೆಯಲ್ಲಿದ್ದವು . 

ಎರಡನೆ ಮಹಾಯುದ್ಧದ ನಂತರ: 

ಎರಡನೆ ಮಹಾಯುದ್ಧ ಮುಗಿದು ನಂತರ ೧೪ ಮೇ ೧೯೪೮ ರಲ್ಲಿ ಇಸ್ರೇಲ್ ಉದಯಿಸುತ್ತದೆ. ಇದೊಂದು ಸಂಕ್ರಮಣ ಕಾಲಘಟ್ಟ . ಜಗತ್ತಿನ ಉದ್ದಗಲಕ್ಕೂ ಹರಿದು ಹಂಚಿಹೋಗಿದ್ದ ಯಹೂದಿಗಳು ತಮ್ಮ ನೆಲಕ್ಕೆ ಹಿಂತಿರುಗಲು ಪ್ರಾರಂಭಿಸುತ್ತಾರೆ. ಹೀಗಿದ್ದೂ ಇವರ ಸಂಖ್ಯೆ ಲಕ್ಷ ಮೀರುವುದಿಲ್ಲ. ನಿಧಾನವಾಗಿ ಕಾರ್ಖಾನೆಗಳು, ಯೂನಿವರ್ಸಿಟಿ ಕಟ್ಟಲು ಶುರು ಮಾಡುತ್ತಾರೆ. ಮುಂದುವರಿದ ದೇಶಗಳ ಮುಂದೆ ಸಪ್ಪೆ ಎನಿಸುವಷ್ಟು ಆರ್ಥಿಕ ಸ್ಥಿತಿ ಇವರದಾಗಿತ್ತು . 

ಎಪ್ಪತ್ತರ ದಶಕದಿಂದ ತೊಂಬತ್ತರ ದಶಕದಲ್ಲಿ ಇಸ್ರೇಲ್: 

ಆರು ಲಕ್ಷವಿದ್ದ ತನ್ನ ಜನಸಂಖ್ಯೆಯನ್ನ ೪೦ ಲಕ್ಷಕ್ಕೆ ಏರಿಸಿಕೊಂಡಿದ್ದು ಇಸ್ರೇಲ್ ನ ಮಹಾಸಾಧನೆ. ಇವರ ಆರ್ಥಿಕತೆ ಬೆಳೆದು ಈಸ್ಟ್ರೇನ್ ಯೂರೋಪಿಯನ್ ದೇಶಗಳ ಆರ್ಥಿಕತೆಯ ಮಟ್ಟಕ್ಕೆ ಬಂದು ಮುಟ್ಟುತ್ತದೆ. ಆದರೂ ಟೆಲಿಫೋನ್, ಕಾರು ಜನ ಸಾಮಾನ್ಯನಿಗೆ ಎಟುಕುತ್ತಿರಲಿಲ್ಲ. ಜನರ ತಲಾದಾಯ ಯೂರೋಪಿನ ಅಥವಾ ಅಮೇರಿಕಾ ಜನರ ತಲಾಯಾದ ಅರ್ಧದಷ್ಟಿತ್ತು . ಅಂದಿನ ದಿನಗಲ್ಲಿ ಇಸ್ರೇಲ್ ವಜ್ರದ ವ್ಯಾಪಾರದಿಂದ ತನ್ನ ಹಣವನ್ನ ಗಳಿಸುತಿತ್ತು.

ತೊಂಬತ್ತರಿಂದ ಎರಡು ಸಾವಿರದ ಹದಿನೈದು: 

ಈ ವೇಳೆಯಲ್ಲಿ ಇಸ್ರೇಲ್ ನಾಟಕೀಯ ಬೆಳವಣಿಗೆ ಕಾಣುತ್ತದೆ. ಜಗತ್ತಿನ ಅತ್ಯಂತ ಉನ್ನತ ತಂತ್ರಜ್ಞಾನ ಇವರಿಂದ ಸೃಷ್ಟಿಯಾಗುತ್ತೆ. ತನ್ನ ಸುತ್ತಲೂ ವೈರಿಗಳೇ ತುಂಬಿದ್ದಾರೆ ಆಕಸ್ಮಾತ್ ಅವರು ತಮ್ಮ ಸರಹದ್ದು ಮುಚ್ಚಿ ನೀರು ಆಹಾರ ನಿಲ್ಲಿಸಿಬಿಟ್ಟರೆ ಎನ್ನುವ ಭಯವನ್ನ ಮೆಟ್ಟಿ ನಿಂತು ಬೇರೆ ದೇಶಗಳಿಗೆ ಆಹಾರ ಎಕ್ಸ್ಪೋರ್ಟ್ ಮಾಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ನಲವತ್ತು ಲಕ್ಷವಿದ್ದ ತಮ್ಮ ಜನ ಸಂಖ್ಯೆಯನ್ನ ಎಪ್ಪತೈದು ಲಕ್ಷದ ಸನಿಹಕ್ಕೆ ತಂದು ನಿಲ್ಲಿಸಿದ್ದಾರೆ. ಇಂದಿಗೆ (2023)ಇಸ್ರೇಲ್ ಜನಸಂಖ್ಯೆ 93.6 ಲಕ್ಷ. ಇವರ ತಲಾದಾಯ ಅನೇಕ ಯೂರೋಪಿಯನ್ ದೇಶಗಳನ್ನ ಹಿಂದಿಕ್ಕಿದೆ. ತಂತ್ರಜ್ಞಾನ ಪ್ರತಿಯೊಬ್ಬ ಪ್ರಜೆಯನ್ನ ತಲುಪಿದೆ. ಕಾರು, ಫೋನ್ ಅಷ್ಟೆಯೇಕೆ ಪ್ರತಿಯೊಬ್ಬ ನಾಗರಿಕನೂ ವಿದೇಶಿ ಪ್ರಯಾಣವನ್ನು ಕೂಡ ಮಾಡಬಲ್ಲಷ್ಟು ಸ್ಥಿತಿವಂತನಾಗಿದ್ದಾನೆ. 

ಮೂಲ ಸೌಕರ್ಯ ಜಗತ್ತಿನ ಮುಂದುವರೆದ ದೇಶಗಳಿಗೆ ಸೆಡ್ಡು ಹೊಡೆಯುವಂತೆ ನಿರ್ಮಿಸಲಾಗಿದೆ. ಜಗತ್ತಿನ ಶ್ರೇಷ್ಠ ವಿಶ್ವವಿದ್ಯಾನಿಲಯ ಇಲ್ಲಿ ತಲೆ ಎತ್ತಿ ನಿಂತಿದೆ. ಟೆಲ್ ಅವಿವ್ ಜಗತ್ತಿನ ಅತ್ಯುತ್ತಮ ವ್ಯಾಪಾರ ಕೇಂದ್ರಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಜಾಗತಿಕ ಮಟ್ಟದಲ್ಲಿ ತಮಗೆ ಬೇಕಾದದ್ದು ಪಡೆಯುವ ಲಾಬಿ ಮಾಡುವ ಹಂತಕ್ಕೆ ಇಸ್ರೇಲಿ ಯಹೂದಿಗಳು ಬೆಳೆದಿದ್ದಾರೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಯಹೂದಿಯೊಬ್ಬನ ಮೇಲೆ ಆಕ್ರಮಣ ಮಾಡುವ ಮುಂಚೆ ಹತ್ತು ಬಾರಿ ಯೋಚಿಸಬೇಕು ಅಷ್ಟರಮಟ್ಟಿಗೆ ತನ್ನ ಶತ್ರುವಿನಲ್ಲಿ ಭಯ ಬಿತ್ತುವಲ್ಲಿ ಇಸ್ರೇಲಿಗಳು ಯಶಸ್ವಿಯಾಗಿದ್ದಾರೆ. 

ಇಸ್ರೇಲಿಗಳ ಹೊಸ ಪರ್ವಾರಂಭ: 

ಜಗತ್ತಿನಲ್ಲಿ ೧೯೬ ದೇಶಗಳಿವೆ ಅದರಲ್ಲಿ ೫೦ ಮುಸ್ಲಿಂ ದೇಶಗಳು ೭ ಮುಸ್ಲಿಂ ಬಾಹುಳ್ಯವಿರುವ ದೇಶಗಳು ಹೀಗಾಗಿ ೫೭ ದೇಶಗಳನ್ನ ಮುಸ್ಲಿಂ ದೇಶಗಳು ಎಂದು ವಿಂಗಡಿಸಬಹುದು. ಜಗತ್ತಿನ ಜನಸಂಖ್ಯೆ ೭ (೭೦೦ ಕೋಟಿ )ಬಿಲಿಯನ್ ಅದರಲ್ಲಿ ೧.೮ (೧೮೦ಕೋಟಿ ) ಬಿಲಿಯನ್ ಜನಸಂಖ್ಯೆ ಮುಸ್ಲಿಮರು. ಅಂದರೆ ಜಗತ್ತಿನ ಜನಸಂಖ್ಯೆಯ ೨೫ ಪ್ರತಿಶತ ಈ ಜನಾಂಗದ ಜನರಿದ್ದಾರೆ. ಒಟ್ಟು ಮುಸ್ಲಿಂ ದೇಶಗಳ ಜಿಡಿಪಿ ಎರಡು ಟ್ರಿಲಿಯನ್ ಡಾಲರ. ಜಗತ್ತಿನ ಒಟ್ಟು ಜಿಡಿಪಿ 103 ಟ್ರಿಲಿಯನ್. ಇಸ್ರೇಲ್ ಜನಸಂಖ್ಯೆ ಕೇವಲ ೮೩ ಲಕ್ಷ ಇವರ ಜಿಡಿಪಿ 564 ಬಿಲಿಯನ್ ಡಾಲರ್. ಇಸ್ರೇಲ್ ಬೆಳವಣಿಗೆಯ ವೇಗ ಗಮನಿಸಿದರೆ ಇದು ಟ್ರಿಲಿಯನ್ ಡಾಲರ್ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ. ಅಂದರೆ ೫೭ ದೇಶಗಳ ಒಟ್ಟು ಮೌಲ್ಯದ ಅರ್ಧ ಭಾಗ ಕೇವಲ ೮೩ ಲಕ್ಷ ಜನಸಂಖ್ಯೆಯ ಇಸ್ರೇಲ್ ಒಂದು ದೇಶ ಹೊಂದಲಿದೆ ಎಂದರೆ ಇಸ್ರೇಲ್ ಅದೆಷ್ಟು ಪವರ್ ಫುಲ್ ಜಗತ್ತಿನ ಬೇರೆಲ್ಲಾ ದೇಶಗಳು ಇಸ್ರೇಲ್ ಎಂದಾಕ್ಷಣ ಅದೇಕೆ ಆ ಮಟ್ಟಿನ ಗೌರವ ಕೊಡುತ್ತವೆ ಎನ್ನುವ ಅರಿವಾದಿತು. 

ವಿಸ್ತೀರ್ಣದಲ್ಲಿ ನಮ್ಮ ಮಿಝೋರಾಂ ರಾಜ್ಯಕ್ಕಿಂತ ಸ್ವಲ್ಪ ಕಡಿಮೆ ಹೊಂದಿರುವ ಇಸ್ರೇಲ್ ಗೌರವದಲ್ಲಿ ಮಾತ್ರ ಜಗತ್ತನ್ನ ಆಕ್ರಮಿಸಿದೆ. ಅಮೇರಿಕಾ ದ ಸಂಸತ್ತು , ಅಮೆರಿಕಾದ ಮೀಡಿಯಾ ಹೌಸ್, ಅಮೆರಿಕಾದ ಬಹುಪಾಲು ವ್ಯಾಪಾರ ಇಸ್ರೇಲ್ ಯಹೂದಿಗಳ ಕೈಲಿದೆ. ಅಮೇರಿಕಾದ ಮೀಡಿಯಾ ಹೌಸ್ ಗಳಲ್ಲಿ ೯೦ ಕ್ಕೂ ಅಧಿಕ ಇಸ್ರೇಲಿಗಳ ಆಡಳಿತದಲ್ಲಿದೆ. ಹೀಗಾಗಿ ಅಮೇರಿಕಾದಲ್ಲಿ  you can criticize God, but you can’t criticize Israel…' ಎನ್ನುವ ಮಾತಿದೆ . 

ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ ಮೂಲವಾಗಿ ಜರ್ಮನಿ ಫ್ರಾನ್ಸ್ ಮತ್ತು ಇಂಗ್ಲೆಂಡ್ ನಲ್ಲಿ ಬಹಳ ಹಿಡಿತ ಹೊಂದಿದೆ . ಆರ್ಥಿಕ ವಲಯದಲ್ಲಿ ರೋತ್ಸ್ ಚೈಲ್ಡ್ ಎನ್ನುವುದು ಎಷ್ಟು ಪ್ರಭಲ ಸಂಸ್ಥೆಎಂದರೆ ಜಗತ್ತಿನ ಹಿರಿಯಣ್ಣ ಅಮೇರಿಕಾ ದ ಪ್ರೆಸಿಡೆಂಟ್ ಯಾರಾಗ ಬೇಕು ಎನ್ನುವುದನ್ನ ಕೂಡ ನಿರ್ಧರಿಸುವಷ್ಟು, ಬಹುತೇಕ ಎಲ್ಲಾ ಮುಖ್ಯ ದೇಶಗಳ ಸೆಂಟ್ರಲ್ ಬ್ಯಾಂಕ್ ನಲ್ಲಿ ಇವರು ಪರೋಕ್ಷ ಅಥವಾ ಅಪರೋಕ್ಷವಾಗಿ ಹಿಡಿತ ಹೊಂದಿದ್ದಾರೆ ಎನ್ನುವುದು ಆರ್ಥಿಕವಲಯದಲ್ಲಿ ಆಗಾಗ್ಗೆ ಪಿಸುಗುಡುವ ವಿಷಯ. ಬೆಂಕಿಯಿಲ್ಲದೆ ಖಾಲಿ ಹೊಗೆ ಹೇಗೆ ತಾನೇ ಬಂದಿತು? ಹೀಗಾಗಿ ಅಮೇರಿಕಾ ಒಂದೇ ಅಲ್ಲದೆ ಜಗತ್ತಿನ ಮುಖ್ಯ ದೇಶಗಳ ಹಣಕಾಸು ಆಟವನ್ನ ನಿಯಂತ್ರಿಸುವುದು ರೋತ್ಸ್ ಚೈಲ್ಡ್ ಎನ್ನುವ ಯಹೂದಿ ಸಂಸ್ಥೆ. 

ಜಗತ್ತನ್ನ ಆಳಲು ಬೇಕಿರುವುದು ಆರ್ಥಿಕ ಸಬಲತೆ ಮಾತ್ರವಲ್ಲ ಅದರ ಜೊತೆಗೆ ತಂತ್ರಜ್ಞಾನದ ನಿಪುಣತೆ ತನ್ನ ಜನಾಂಗದ ಮೇಲೆ, ತನ್ನ ಬದ್ಧತೆಯ ಮೇಲೆ ಅತೀವ ಕಾಳಜಿ ನಂಬಿಕೆ ಮತ್ತು ವಿಶ್ವಾಸ. ಕೋಟಿ ಮೀರದ ಈ ಜನಾಂಗ ಮುಂಬರುವ ದಿನಗಳಲ್ಲಿ ಇಡಿ ವಿಶ್ವದ ಮೇಲೆ ಹಿಡಿತ ಹೊಂದಿದರೆ ಅದು ಆಶ್ಚರ್ಯ ಪಡುವ ವಿಷಯವಂತೂ ಅಲ್ಲ. ಇಸ್ರೇಲಿಗಳ ಯಹೂದಿಗಳ ಬದ್ಧತೆ, ಕಟ್ಟು ನಿಟ್ಟಿಗೆ ಉದಾಹರಣೆ ನೀಡಲೇಬೇಕು. 

ಇಲ್ಲಿನ ಪ್ರತಿಯೊಬ್ಬ ಪ್ರಜೆಯೂ ಮಿಲಿಟರಿ ಸೇವೆ ಸಲ್ಲಿಸಲೇಬೇಕು. ಇಲ್ಲಿ ಹೆಣ್ಣು ಗಂಡು ಎನ್ನವ ಬೇಧವಿಲ್ಲ. ಇಸ್ರೇಲಿಗಳ ಮಗು ಜಗತ್ತಿನ ಯಾವುದೇ ಭಾಗದಲ್ಲಿ ಜನಿಸಲಿ ಆ ಮಗುವನ್ನ ಇಸ್ರೇಲಿ ಎಂದೇ ಪರಿಗಣಿಸಲಾಗುತ್ತದೆ. ಮತ್ತು ಆ ಮಗು ಕೂಡ ಮಿಲಿಟರಿ ಸೇವೆ ಮಾಡಲೇಬೇಕು. ವಿದೇಶದಲ್ಲಿ ನೆಲೆಸಿರುವ ಇಂತಹ ಮಕ್ಕಳು ೧೭ ನೇ ವಯಸ್ಸಿಗೆ ತಲುಪಿದಾಗ ತಾವಿರುವ ದೇಶದ ಇಸ್ರೇಲ್ ಎಂಬೆಸಿಗೆ ಹೋಗಿ ನೊಂದಾಯಿಸಿಕೊಳ್ಳಬೇಕು. ಆಗ ಮಾತ್ರ ಇದರಿಂದ ವಿನಾಯತಿ ಸಿಗುತ್ತದೆ. ಯುದ್ಧ ಅಥವಾ ಸಾಮಾನ್ಯವಲ್ಲದ ಸನ್ನಿವೇಶದಲ್ಲಿ ಪ್ರತಿ ಪ್ರಜೆಯೂ ಸೈನಿಕನಾಗಿ ಬದಲಾವಣೆ ಹೊಂದುವ ವ್ಯವಸ್ಥೆ ಅದನ್ನ ಕಟ್ಟುನಿಟ್ಟಿನಿಂದ ಪಾಲಿಸುವ ಜನ ನಾಳೆ ಜಗತ್ತನ್ನ ಆಳಲು ಏಕೆ ಸಾಧ್ಯವಿಲ್ಲ? 

ಇಸ್ರೇಲ್ ಯುವ ಜನತೆ ತನ್ನ ಹಿಂದಿನ ತಲೆಮಾರಿಗಿಂತ ಹೆಚ್ಚು ಧಾರ್ಮಿಕತೆ ಕಡೆ ಒಲವು ತೋರುತ್ತಿದೆ. ತಂತ್ರಜ್ಞಾನ ನಭದೆತ್ತರಕ್ಕೆ ಚಿಮ್ಮುತ್ತಿರುವ ಅದರ ಹರಿಕಾರರು ಆಗಿರುವ ಯಹೂದಿಗಳು ಮಾತ್ರ ತಮ್ಮ ಮೂಲ ನಂಬಿಕೆಗಳಿಗೆ ಹೆಚ್ಚು ಹೆಚ್ಚು ನಿಷ್ಠರಾಗುತ್ತಿದ್ದಾರೆ. ಯಹೂದಿಯಲ್ಲದ ಇತರರೊಡನೆ ಮದುವೆಯಂತಹ ಸಂಬಂಧಗಳನ್ನ ಅರವತ್ತೈದು ಪ್ರತಿಶತ ಇಸ್ರೇಲಿಗಳು ಒಪ್ಪುವುದಿಲ್ಲ ಎನ್ನುವುದು ಇಂತಹ ಮಾತಿಗೆ ಪುಷ್ಟಿ ನೀಡುತ್ತದೆ. ಜಗತ್ತು ಬೇರೆ ನಾವೇ ಬೇರೆ ಎನ್ನುವ ಭಾವನೆ ಬಂದರೆ ಅಲ್ಲಿಗೆ ಎಂತಹ ಸಾಧನೆಯೂ ಶೂನ್ಯ. ಇಸ್ರೇಲ್ ಕೇವಲ ಧಾರ್ಮಿಕತೆಗೆ ಕಟ್ಟು ಬೀಳದೆ ಇರಲಿ. ಮುಂಬರುವ ದಿನಗಲ್ಲಿ ಇವರಿಂದ ವಿಶ್ವ ಶಾಂತಿ ಸ್ಥಾಪನೆಯಾಗಲಿ ಎನ್ನುವುದಷ್ಟೆ ಆಶಯ. ಇದೇನೆ ಇರಲಿ ಯಹೂದಿಗಳ ಯಶೋಗಾಥೆ ಸದ್ಯಕ್ಕೆ ನಮಗಂತೂ ಸ್ಪೂರ್ತಿದಾಯಕ. ಸ್ವಾವಲಂಬನೆ, ಸ್ವಾಭಿಮಾನ, ಪರಿಶ್ರಮ ಅವರಿಂದ ಒಂಚೂರು ನಾವು ಎರವಲು ಪಡೆದರೆ ಯಶೋಗಾಥೆಯಲ್ಲಿ ಯಹೂದಿಗಳಿಗೂ ನಾವು ಸೆಡ್ಡು ಹೊಡೆಯಬಹದು. ನಾವು ಅದಕ್ಕೆ ಸಿದ್ಧರಿದ್ದೇವೆಯೇ ??
Post a Comment (0)
Previous Post Next Post