ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ದಿನಾಂಕ: 22-09-2025 ರಿಂದ 7-10-2025 ರ ವರೆಗೆ ನಡೆಸಲಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (Social and Educational Survey of Backward Classes) ಗೆ ಸಂಬಂಧಿಸಿದ, ಆಯೋಗ ಬಿಡುಗಡೆ ಮಾಡಿರುವ ಪದೇ ಪದೇ ಕೇಳಲಾಗುವ ಪ್ರಶ್ನೆಗಳನ್ನು (FREQUENTLY ASKED QUESTIONS - FAQs) ಇಲ್ಲಿ ಪಟ್ಟಿ ಮಾಡಿದೆ.

ನೀವು ಉತ್ತರ ಬಯಸುವ ಪ್ರಶ್ನೆಗಳ ಮೇಲೆ ಕ್ಲಿಕ್ ಮಾಡಿ ಮಾಹಿತಿಯನ್ನು ಪಡೆಯಬಹುದು.

ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ಪದೇ ಪದೇ ಕೇಳಲಾಗುವ ಪ್ರಶ್ನೆಗಳು (FAQs)


1. Android 8.0 Version ಮೊಬೈಲ್ ಇಲ್ಲದಿದ್ದರೆ ತೆಗೆದುಕೊಳ್ಳಬೇಕಾದ ಕ್ರಮ?
ಉತ್ತರ: Android 8.0 Version ಕಡ್ಡಾಯ.
2. ಹೊರ ರಾಜ್ಯದಿಂದ ಮದುವೆಯಾಗಿ ಬಂದಿರುವ ಕರ್ನಾಟಕ ರಾಜ್ಯದಲ್ಲಿ ನೋಂದಣಿಗಿರುವ ಹೆಣ್ಣು ಮಕ್ಕಳ ಆಧಾರ್ ಕಾರ್ಡ್ ನಲ್ಲಿರುವವರನ್ನು ಮೊಬೈಲ್ ಆಪ್‌ನಲ್ಲಿ ನೋಂದಣಿ ಮಾಡಬಹುದೇ?
ಉತ್ತರ: ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ.
3. ಸರ್ವೇ ಮಾಡುವ ಸಂದರ್ಭದಲ್ಲಿ ಒಂದು ಮನೆಯ ಸಮೀಕ್ಷೆಯು ಅಪೂರ್ಣವಾಗಿದ್ದಲ್ಲಿ ಮುಂದಿನ ಮನೆಯ ಸಮೀಕ್ಷೆಯ ಕಾರ್ಯವನ್ನು ಕೈಗೊಳ್ಳಬಹುದೇ?
ಉತ್ತರ: ಒಂದು ಕುಟುಂಬದ ಸಮೀಕ್ಷೆಯನ್ನು ಪೂರ್ಣಗೊಂಡ ನಂತರವೇ ಮುಂದಿನ ಕುಟುಂಬದ ಸಮೀಕ್ಷೆಯನ್ನು ಕೈಗೊಳ್ಳಲು ಅವಕಾಶವಿರುತ್ತದೆ.
ಆದರೆ, ಕೆಲವು ಕುಟುಂಬಗಳ ಮಾಹಿತಿ ಸಂಗ್ರಹಣೆ ಅಪೂರ್ಣವಾದಲ್ಲಿ 3 ಕುಟುಂಬಗಳವರೆಗೆ ಡ್ರಾಫ್ಟ್ (Draft) ನಲ್ಲಿ ಮಾಹಿತಿ ಇಡಲು ಅವಕಾಶವಿದೆ.
4. ಮಾಸ್ಟರ್ ಟ್ರೈನರ್‌ಗಳ ಸೇವೆಯನ್ನು ಸಮೀಕ್ಷೆ ಕಾರ್ಯವು ಮುಗಿಯುವವರೆಗೂ ಪಡೆಯಬಹುದೆ?
ಉತ್ತರ: ಹೌದು.
5. ಮಾಸ್ಟರ್ ಟ್ರೈನರ್, ಗಣತಿದಾರರು ಮತ್ತು ಮೇಲ್ವಿಚಾರಕರ ಸಂಭಾವನೆಯನ್ನು ನಿಗಧಿಪಡಿಸುವ ಬಗ್ಗೆ?
ಉತ್ತರ: ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿದೆ.
6. ಮನೆಯ ಸಂಖ್ಯೆ ಇಲ್ಲದಿದ್ದರೆ? ಏನು ಮಾಡಬೇಕು?
ಉತ್ತರ: ಸಮೀಕ್ಷೆದಾರರಿಗೆ ನೀಡಿರುವ ಮನೆಪಟ್ಟಿಯಲ್ಲಿ ಮನೆಗಳ ಸಂಖ್ಯೆಯನ್ನು ನಮೂದಿಸಲಾಗಿದೆ. ಅದನ್ನು ನೋಡಿ UHID ಸಂಖ್ಯೆಯನ್ನು ನಮೂದಿಸುವುದು.
ಒಂದು ವೇಳೆ ಮನೆಸಂಖ್ಯೆ ಇಲ್ಲದಿದ್ದಲ್ಲಿ, ಆ ಮನೆಯ ಜಿಯೋ ಕೋರ್ಡಿನೇಟ್ ಗಳನ್ನು ತೆಗೆದುಕೊಂಡಲ್ಲಿ ಸದರಿ ಮನೆಯ UHID / ಸಮೀಕ್ಷಾ ಸಂಖ್ಯೆ ತಾನೇತಾನಾಗಿ Generate ಆಗುತ್ತದೆ. ಆ ನಂತರ ಸದರಿ ಮನೆಯ ಸಮೀಕ್ಷೆ ಮಾಡಬಹುದು.
7. ಆಧಾರ್‌ನಲ್ಲಿ ಹೊಸದಾಗಿ ಸೇರ್ಪಡೆಯಾದ ಹೆಸರನ್ನು ಹೇಗೆ ಅಪ್ ಡೇಟ್ ಮಾಡಬೇಕು?
ಉತ್ತರ: ಸಮೀಕ್ಷೆಯ ವೇಳೆಯಲ್ಲಿ ಒದಗಿಸಿದ ಆಧಾರ್ ಕಾರ್ಡ್ ನ್ನು ನಮೂದಿಸುವುದು.
8. ಬಿ.ಪಿ.ಎಲ್ ಕಾರ್ಡ್ / ಆಧಾರ್ ಲಭ್ಯವಿಲ್ಲದಿದ್ದರೇ? ಏನು ಮಾಡಬೇಕು?
ಉತ್ತರ: ಬಿ.ಪಿ.ಎಲ್ / ಆಧಾರ್ ಕಾರ್ಡ್ /ಜಾತಿ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಲು ತಿಳಿಸುವುದು. ಕಡ್ಡಾಯ.
9. ಅಲೆಮಾರಿ ಜನಾಂಗದಲ್ಲಿ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಮತದಾರರಪಟ್ಟಿ, ಯಾವುದೇ ದಾಖಲೆಗಳು ಇರುವುದಿಲ್ಲ.
ಉತ್ತರ: ಬಿ.ಪಿ.ಎಲ್ / ಆಧಾರ್ ಕಾರ್ಡ್ /ಜಾತಿ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಒದಗಿಸಲು ತಿಳಿಸುವುದು. ಕಡ್ಡಾಯ.
10. ಪತಿ ಗಣತಿದಾರರಿಗೆ ಸಮೀಕ್ಷಾ ಕೈಪಿಡಿ 2025 ಒದಗಿಸುವುದು?
ಉತ್ತರ: ಒದಗಿಸಲಾಗುತ್ತಿದೆ.
11. ಪ್ರತಿಯೊಂದು ಮನೆ ಸಮೀಕ್ಷೆ ಮಾಡಬೇಕೋ ಅಥವಾ ಕೇವಲ ಹಿಂದುಳಿದ ಜಾತಿಯ ಸಮುದಾಯಗಳ ಮನೆಗಳಿಗೆ ಮಾತ್ರ ಭೇಟಿ ನೀಡಬೇಕೆ?
ಉತ್ತರ: ಪ್ರತಿಯೊಂದು ಮನೆಗೆ ಭೇಟಿ ನೀಡಿ ಎಲ್ಲಾ ಜಾತಿ ಕುಟುಂಬಗಳನ್ನು (ಹಿಂದುಳಿದ ವರ್ಗಗಳು, ಇತರೆ ಜಾತಿಗಳು, ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಸೇರಿದಂತೆ) ಗುರುತಿಸಬೇಕು.
12. ಕುಟುಂಬದ ಮುಖ್ಯಸ್ಥರು ಮಹಿಳಾ/ವಿಧವೆ ಇದ್ದಲ್ಲಿ ಹೇಗೆ ಮಾಡಬೇಕು?
ಉತ್ತರ: ಕುಟುಂಬದ ಮುಖ್ಯಸ್ಥ ಎಂದು ಪರಿಗಣಿಸಿ ಸಮೀಕ್ಷೆಯನ್ನು ಮುಂದುವರೆಸುವುದು.
13. ಸಮೀಕ್ಷೆಗೆ ಹೋದ ವೇಳೆಯಲ್ಲಿ ರೇಷನ್ ಕಾರ್ಡ್ ಅಥವಾ ಆಧಾ‌ರ್ ಕಾರ್ಡ ನೀಡದೇ ಇದ್ದಲ್ಲಿ ಏನು ಮಾಡಬೇಕು?
ಉತ್ತರ: ಬಿ.ಪಿ.ಎಲ್ / ಆಧಾರ್ ಕಾರ್ಡ್ /ಜಾತಿ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಒದಗಿಸುವುದು ಕಡ್ಡಾಯ.
14. ವಿವಾಹವಾದ ಅಂತರ್ಜಾತಿ ಮನೆಯ ಯಜಮಾನನ ಪತ್ನಿಯು ತನ್ನ ಮಕ್ಕಳಿಗೆ ತನ್ನ ಜಾತಿಯನ್ನೇ ಕಡ್ಡಾಯವಾಗಿ ನಮೂದಿಸಿ ಎಂದು ಹೇಳಿದರೆ ಏನು ಮಾಡುವುದು?
ಉತ್ತರ: ಮಕ್ಕಳ ಜಾತಿ, ತಂದೆಯ ಜಾತಿಯನ್ನು ಅವಲಂಬಿಸಿ ನಿರ್ಧರಿತವಾಗುತ್ತದೆ.
ಆದ ಕಾರಣ ಪತ್ನಿಯ ಜಾತಿಯ ಆಧಾರದ ಮೇಲೆ ಮಕ್ಕಳ ಜಾತಿಯನ್ನು ಪರಿಗಣಿಸಲು ಅವಕಾಶವಿರುವುದಿಲ್ಲ.
15. ದೇವದಾಸಿ ಕುಟುಂಬದ ದೇವದಾಸಿಯರ ಮಕ್ಕಳ ಗೌರವದ ಉದ್ದೇಶದಿಂದ ತಂದೆಯ ಹೆಸರನ್ನು ನಮೂದಿಸಿದ ಪ್ರಕರಣಗಳಲ್ಲಿ ಗಣತಿಯ ಸಮಯದಲ್ಲಿ ತಂದೆಯ ಹೆಸರನ್ನು ನಮೂದಿಸಬಹುದೇ?
ಉತ್ತರ: ಮಾಹಿತಿದಾರರು ಒದಗಿಸಿದ ಮಾಹಿತಿ ಪ್ರಕಾರ ಶಾಲಾ ದಾಖಲಾತಿಗಳ ಜಾತಿ ಕಾಲಂನಲ್ಲಿ ನಮೂದಿಸುವುದು.
16. ಕುಟುಂಬದ ಮುಖ್ಯಸ್ಥ ಗಣತಿಯ ಸಮಯದಲ್ಲಿ ತನ್ನ ಮೊಬೈಲ್ ನಂಬರನ್ನು ಕೊಡಲು ನಿರಾಕರಿಸಿದರೆ ಏನು ಮಾಡುವುದು?
ಉತ್ತರ: ನಂಬರನ್ನು ಒದಗಿಸಲು ಮನವೊಲಿಸುವುದು.
ಆದಾಗ್ಯೂ ನಿರಾಕರಿಸಿದರೆ ಕೈಪಿಡಿಯ ಪುಟ ಸಂಖ್ಯೆ: 81 ರಲ್ಲಿ ನೀಡಿರುವ ಒಪ್ಪಿಗೆ ಪತ್ರದ ಮೇಲೆ Upload / Submit ಮಾಡುವುದು.
17. ಗಣತಿಯ ಸಮಯದಲ್ಲಿ ಕುಟುಂಬದ ಮುಖ್ಯಸ್ಥರು ಹಾಗೂ ಸದಸ್ಯರ ಹತ್ತಿರ ಯಾವುದೇ ತರಹದ ಮೊಬೈಲ್ ಇಲ್ಲದಿದ್ದರೆ ಏನು ಮಾಡುವುದು?
ಉತ್ತರ: ಸದರಿ ಕುಟುಂಬದವರ ಪರಿಚಯಸ್ಥರ ಮೊಬೈಲ್ ಸಂಖ್ಯೆ ಪಡೆದು ನಮೂದಿಸುವುದು.
18. ಗಣತಿಯ ಸಮಯದಲ್ಲಿ ಕೆಲವು ಪ್ರದೇಶಗಳಲ್ಲಿ ಮೊಬೈಲ್ ನೆಟ್ ವರ್ಕ್ ಇರದ್ದಿದರೆ ಸರ್ವೇ ಮಾಡಲು ತೊಂದರೆ ಯಾವುದರಿಂದ ಪರ್ಯಾಯವಾಗಿ ಏನು ಮಾಡುವುದು?
ಉತ್ತರ: ನೆಟ್ವರ್ಕ್ ಇಲ್ಲದಿದ್ದರೂ, ಆಫ್ ಲೈನ್ mode ನಲ್ಲಿ ಸಮೀಕ್ಷೆಯನ್ನು ಮಾಡಿ ದಾಖಲಿಸಲು App ನಲ್ಲಿ ಸಾಧ್ಯವಾಗುತ್ತದೆ.
ನೆಟ್ವರ್ಕ್ ಸಂಪರ್ಕ ಬಂದೊಡನೆ ಆ ಮಾಹಿತಿಯು ತಾನಾಗಿಯೇ Upload ಆಗುತ್ತದೆ.
19. ಗಣತಿಯ ಸಮಯದಲ್ಲಿ ಮಾಹಿತಿಯನ್ನು ನಮೂದಿಸಿ, submitt ಮಾಡಿದ ನಂತರ ಕುಟುಂಬದ ಮುಖ್ಯಸ್ಥರು ಮಾಹಿತಿಯನ್ನು ಬದಲಾಯಿಸಲು ಕೋರಿದರೆ ಅಥವಾ ಕಣ್ಣಪ್ಪಿನಿಂದಾಗಿ ತಪ್ಪಾದ ಮಾಹಿತಿಯನ್ನು ನಮೂದಿಸಿ submitt ಮಾಡಿದ ನಂತರ ಎಡಿಟ್ ಮಾಡಲು ಅವಕಾಶ ಇದೆಯೇ?
ಉತ್ತರ: Submit ಮಾಡುವ ಪೂರ್ವದಲ್ಲಿ ತಿದ್ದುಪಡಿ ಮಾಡಬಹುದು.
Submit ಆದ ನಂತರ ತಿದ್ದುಪಡಿಗೆ ಅವಕಾಶವಿರುವುದಿಲ್ಲ.
20. ಜಿಲ್ಲೆಯ ಹೊರಗಿರುವ ವ್ಯಕ್ತಿಗಳ ಸಮೀಕ್ಷೆ?
ಉತ್ತರ: ಜಿಲ್ಲೆಯ ಹೊರಗಿರುವ ಕುಟುಂಬಗಳ ಸಮೀಕ್ಷೆಯನ್ನು ಆಯಾಯ ಜಿಲ್ಲೆಗಳಲ್ಲಿ ಮಾಹಿತಿ ಒದಗಿಸಲು ಅವಕಾಶವಿರುತ್ತದೆ.
21. ಹೆಣ್ಣುಮಗಳು ಇತ್ತೀಚಿಗೆ ಮದುವೆಯಾಗಿ ಗಂಡನ ಮನೆಗೆ ಬಂದ ಸಂದರ್ಭದಲ್ಲಿ ತವರುಮನೆ ಅಥವಾ ಗಂಡನಮನೆ ಯಾವುದನ್ನು ಪರಿಗಣಿಸುವುದು?
ಉತ್ತರ: ಗಂಡನ ಮನೆಯಲ್ಲಿ ನಡೆಯುವ ಸಮೀಕ್ಷೆಯಲ್ಲಿ ಮಾಹಿತಿ ಒದಗಿಸುವುದು.
22. ಒಂದು ಕುಟುಂಬದ ಸದಸ್ಯರು ಒಂದೇ ಪಡಿತರ ಚೀಟಿ ಹೊಂದಿದ್ದು, ಸದರಿ ಕುಟುಂಬದ ಸದಸ್ಯರು ಬೇರೆಬೇರೆ ಕಡೆ ವಾಸವಿದ್ದಲ್ಲಿ ಯಾವ ಕ್ರಮಕೈಗೊಳ್ಳಬೇಕು?
ಉತ್ತರ: ಕುಟುಂಬದ ಪಡಿತರಚೀಟಿಯನ್ನು ಆಧರಿಸಿ ಒಂದೇ ಕಡೆ ಮಾಹಿತಿಯನ್ನು ನಮೂದಿಸುವುದು.
23. ಗಣತಿದಾರರು ಗಣತಿ ಮಾಡುವಾಗ ಮಾಹಿತಿದಾರರ ಜಾತಿಯ ಬಗ್ಗೆ ದಾಖಲಾತಿ ಪತ್ರವನ್ನು ಕಡ್ಡಾಯವಾಗಿ ಕೇಳಬೇಕೆ?
ಉತ್ತರ: ಅಗತ್ಯವಿಲ್ಲ.
24. ಸದರಿ ಮೊಬೈಲ್ ಆಪ್ ಕೆಲವು ಮೊಬೈಲ್ ಗಳಲ್ಲಿ ಡೌನ್ಫೋಡ್ ಆಗುತ್ತಿಲ್ಲ?
ಉತ್ತರ: ಆಯಾಯ ಜಿಲ್ಲೆಯ ಡಿ.ಪಿ.ಎಂ. ಸಿಬ್ಬಂದಿಯನ್ನು ಸಂಪರ್ಕಿಸುವುದು.
25. ಕುಟುಂಬದಲ್ಲಿ ಯಾರಾದರೂ ವಿಕಲಚೇತನರಿದ್ದಲ್ಲಿ ಅವರನ್ನು ಸೇರ್ಪಡೆಗೊಳಿಸಲು ಅವಕಾಶವಿದೆಯೇ?
ಉತ್ತರ: ಅವಕಾಶ ಇದೆ.
26. ಜನ್ಮ ದಿನಾಂಕವನ್ನು ಸಡಿಲಗೊಳಿಸಿ ವಯಸ್ಸನ್ನು ನಮೂದಿಸಲು ಅವಕಾಶ ಕಲ್ಪಿಸುವುದು?
ಉತ್ತರ: ಸನ್ನಿವೇಶ ಉದ್ಭವಿಸುವುದಿಲ್ಲ.
27. ಸಮೀಕ್ಷೆ ಅರ್ಜಿಯನ್ನು ಭರ್ತಿಮಾಡಿದ ನಂತರ ಡಿಲೀಟ್ option ನೀಡಿ ಅರ್ಜಿಯನ್ನು ತುಂಬಲು ಅವಕಾಶ ಕಲ್ಪಿಸಿ, ಸಮೀಕ್ಷೆ ನಡೆಸಿರುವ ಕುಟುಂಬದ ಯಜಮಾನರಿಗೆ ಸಂದೇಶ/ಭರ್ತಿ ಮಾಡಿರುವ ಅರ್ಜಿಯನ್ನು ಡೌನ್ ಲೋಡ್ ಮಾಡಿ ಪ್ರಿಂಟ್ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವುದು?
ಉತ್ತರ: Submit ಮಾಡುವ ಪೂರ್ವದಲ್ಲಿ ತಿದ್ದುಪಡಿ ಮಾಡಬಹುದು.
Submit ಆದ ನಂತರ ಡಿಲೀಟ್‌ಗೆ ಅವಕಾಶವಿರುವುದಿಲ್ಲ.
ಪ್ರಿಂಟ್ ನೀಡಲು ಅವಕಾಶ ಇಲ್ಲ.
28. ಒಂದು ಮನೆಯ ವಿವರಗಳು ಪೂರ್ತಿ ಮಾಡಿರುತ್ತೇವೆ Submit ಕೊಟ್ಟಿರುತ್ತೇವೆ. ಆದರೆ Submit ಆಗಿರುವುದಿಲ್ಲ. ಆಗ ಮುಂದಿನ ಕುಟುಂಬಕ್ಕೆ ಸಮೀಕ್ಷೆಗೆ ಹೋಗಬಹುದೇ?
ಉತ್ತರ: ಒಂದು ಮನೆಯ ವಿವರಗಳು ಪೂರ್ತಿ Submit ಆದ ನಂತರವೇ ಮುಂದಿನ ಕುಟುಂಬ ಸರ್ವೆ ಮಾಡುವ ಅವಕಾಶವಿರುತ್ತದೆ.
29. ಜಿಲ್ಲೆ, ತಾಲ್ಲೂಕು, ಗ್ರಾಮಗಳ Code ಬೇಕಾಗಿದೆ?
ಉತ್ತರ: ಆಪ್‌ನಲ್ಲಿ ಒದಗಿಸಿದೆ. (ಡ್ರಾಪ್-ಡೌನ್ ನಲ್ಲಿರುತ್ತದೆ)
30. ಕುಟುಂಬದಲ್ಲಿ ಮಗಳು ವಿವಾಹಿತೆಯಾಗಿದ್ದು, ಗಂಡನ ಮನೆಗೆ ಹೋಗಿದ್ದಲ್ಲಿ ವಿವರವನ್ನು ನಮೂದಿಸಬೇಕೇ?
ಉತ್ತರ: ಪಡಿತರ ಚೀಟಿಯಲ್ಲಿ ಅವರ ಹೆಸರು ಇದ್ದಲ್ಲಿ ವಿವರವನ್ನು ನಮೂದಿಸಬೇಕು.
31. ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಹೊಂದದೇ ಇರುವ ಕೆಲವು ವಿವಾದಿತ ಜಾತಿಗಳ ಸರ್ವೇ ಮಾಡುವಾಗ ಮಾಹಿತಿದಾರರು ಪರಿಶಿಷ್ಟ ಜಾತಿ ಎಂದು ಹೇಳುವ ಜಾತಿಯೇ ಅಂತಿಮವೇ?
ಉತ್ತರ: 101 ಜಾತಿಗಳ ಪಟ್ಟಿಯನ್ನು ನೀಡಲಾಗಿದೆ.
ಮಾಹಿತಿದಾರರು ಪಟ್ಟಿಯಲ್ಲಿರುವ ಜಾತಿಯನ್ನು ತಿಳಿಸಿದಲ್ಲಿ ಮಾತ್ರ ನಮೂದಿಸಬೇಕು.
32. ಕುಟುಂಬದಲ್ಲಿ 18 ವರ್ಷ ಮೇಲ್ಪಟ್ಟವರು ಯಾರು ಇರದೇ ಇದ್ದ ಸಂದರ್ಭದಲ್ಲಿ ಮಾಹಿತಿಯನ್ನು ಯಾರಿಂದ ಪಡೆಯಬೇಕು?
ಉತ್ತರ: 18 ವರ್ಷ ಮೇಲ್ಪಟ್ಟವರು ಯಾರು ಇಲ್ಲದಿದ್ದಲ್ಲಿ ಅವರಲ್ಲಿ ಹಿರಿಯರಾದ ಸದಸ್ಯರಿಂದ ಮಾಹಿತಿಯನ್ನು ಪಡೆಯಬಹುದು.
ಆದರೆ ಬಿ.ಪಿ.ಎಲ್ / ಆಧಾರ್ ಕಾರ್ಡ್ / ಜಾತಿ ಪ್ರಮಾಣಪತ್ರ ಇವುಗಳಲ್ಲಿ ಯಾವುದಾದರೂ ಒಂದನ್ನು ಒದಗಿಸುವುದು ಕಡ್ಡಾಯ.
33. ಮೊಬೈಲ್ ಆಪ್ ನಲ್ಲಿ, Village code, Ward Number ಕೇಳುತ್ತಿದ್ದು ನಮೂದು ಮಾಡಬೇಕಾಗಿರುತ್ತದೆ?
ಉತ್ತರ: Dropdown ನಲ್ಲಿ ಲಭ್ಯವಿದೆ.
34. ಕುಟುಂಬದಲ್ಲಿ ತಂದೆ ನಿಧನ ಹೊಂದಿದ್ದು, ತಾಯಿ ಹಾಗೂ ಮಗ ಮಾತ್ರ ಇದ್ದಲ್ಲಿ ಕುಟುಂಬದ ಮುಖ್ಯಸ್ಥರಾಗಿ ತಾಯಿಯನ್ನು ಪರಿಗಣಿಸಬುದೇ?
ಉತ್ತರ: ಹೌದು.
35. ಪಡಿತರ ಚೀಟಿ ಇಲ್ಲದೆಹೋದ ಸಮಯದಲ್ಲಿ ಅಧಾರ್ ಸಂಖ್ಯೆ ನಮೂದು ಮಾಡಿದರೂ ವಿವರಗಳು ಕಾಣಿಸುತ್ತಿಲ್ಲ ಈ ಸಂಬಂಧ ಹೀಗೆ ಮುಂದುವರೆಯಬೇಕು ಎಂದು ತಿಳಿಸಬೇಕಾಗಿದೆ?
ಉತ್ತರ: ಪ್ರತಿಯೊಬ್ಬ ಸದಸ್ಯರ ಆಧಾ‌ರ್ ಸಂಖ್ಯೆ ನಮೂದಿಸಿದ ನಂತರ ಅವರ ಹೆಸರುಗಳನ್ನು ನಮೂದಿಸುವುದು.
36. ಮೇಲ್ವಿಚಾರಕರು ಗಣತಿದಾರರ 100% ಸರ್ವೆಯನ್ನು (cross check) ಮಾಡಲು ಅವಕಾಶ ಇದೆಯೇ?
ಉತ್ತರ: 10% ಮನೆಗಳನ್ನು Cross Check ಮಾಡಬಹುದು.
37. ಮೇಲ್ವಿಚಾರಕರಿಗೆ, ಸಮೀಕ್ಷೆದಾರರಿಗೆ ತಾಲ್ಲೂಕುಮಟ್ಟದ ಮಾಸ್ಟರ್ ಟ್ರೈನರ್ ಗಳಿಗೆ ಹಾಗೂ ಜಿಲ್ಲಾಮಟ್ಟದ ಮಾಸ್ಟರ್ ಟ್ರೈನರ್ ಗಳಿಗೆ ಸಮೀಕ್ಷೆ ಕಾರ್ಯ ಕೈಗೊಳ್ಳಲು ಗೌರವಧನ ಪಾವತಿಯ ಬಗ್ಗೆ?
ಉತ್ತರ: ಸರ್ಕಾರದ ಮಟ್ಟದಲ್ಲಿ ತೀರ್ಮಾನಿಸಲಾಗುತ್ತಿದೆ.
38. ಒಂದು ಮನೆಯಲ್ಲಿ ಒಂದಕ್ಕಿಂತ ಹೆಚ್ಚು ರೇಷನ್ ಕಾರ್ಡ್ ಹೊಂದಿದ್ದಲ್ಲಿ ಅಂತಹ ಕುಟುಂಬದ ಸದಸ್ಯರುಗಳನ್ನು ಸಮೀಕ್ಷೆ ನಡೆಸುವ ಬಗ್ಗೆ?
ಉತ್ತರ: ಪಡಿತರ ಚೀಟಿವಾರು, ಪ್ರತ್ಯೇಕ ಕುಟುಂಬಗಳೆಂದು ಪರಿಗಣಿಸಿ ಸಮೀಕ್ಷೆ ನಡೆಸಬೇಕು.
39. ಪಡಿತರ ಚೀಟಿ ಇಲ್ಲದೆ ಹೋದ ಸಮಯದಲ್ಲಿ ಆಧಾರ್ ಸಂಖ್ಯೆ ನಮೂದು ಮಾಡಿದರೂ ವಿವರ ಕಾಣಿಸುತ್ತಿಲ್ಲ?
ಉತ್ತರ: ಹೌದು. ಮಾಹಿತಿಯನ್ನು ಅವರಿಂದ ಪಡೆದು ಭರ್ತಿ ಮಾಡಬೇಕು.
40. ಆಫ್‌ಲೈನ್‌ ನಲ್ಲಿ ಎಲ್ಲಾ ಪ್ರಶ್ನಾವಳಿಗಳು open ಆಗುವ ವ್ಯವಸ್ಥೆ ಕಲ್ಪಿಸುವುದು?
ಉತ್ತರ: ಕಲ್ಪಿಸಲಾಗಿದೆ.
41. ಒಂದಕ್ಕಿಂತ ಹೆಚ್ಚು ಕಾರಣಕ್ಕಾಗಿ ಸಾಲ ಪಡೆದಿದ್ದರೆ ಹೇಗೆ ನಮೂದಿಸಬೇಕು?
ಉತ್ತರ: ಬಹು ಆಯ್ಕೆಗೆ ಆಪ್‌ನಲ್ಲಿ ಅವಕಾಶ ಕಲ್ಪಿಸಲಾಗಿದೆ.
42. ಕಾರ್ಮಿಕ ವರ್ಗದವರು ಕೆಲಸದ ನಿಮಿತ್ತ/ ಆನಾರೋಗ್ಯ ಅಥವಾ ಇತರೆ ಕಾರಣಗಳಿಂದ ಸಮೀಕ್ಷಾ ಸಂದರ್ಭದಲ್ಲಿ ಮನೆಯಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ರಕ್ತಸಂಬಂಧಿಗಳಿಂದ ಮಾಹಿತಿ ಪಡೆಯಬಹುದೇ?
ಉತ್ತರ: ಕುಟುಂಬದ ಸದಸ್ಯರೇ ಮಾಹಿತಿ ಒದಗಿಸುವುದು.
43. App ನಲ್ಲಿ ವಿವರಗಳನ್ನು ಭರ್ತಿ ಮಾಡುವಾಗ ಹೊಸ ಸದಸ್ಯರುಗಳನ್ನು ಸೇರಿಸುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಇಲ್ಲದವರ ವಿವರಗಳನ್ನು ನಮೂದಿಸುವ ಬಗೆ ಹೇಗೆ?
ಉತ್ತರ: ನೈಜತೆ ಬಗ್ಗೆ ಪರಿಶೀಲಿಸಿ ಸೇರಿಸಬಹುದು.
44. ಮನೆಯ ಯಜಮಾನನು ಸಮೀಕ್ಷೆಗೆ ಸಂಬಂಧಪಟ್ಟ ಪೂರ್ಣ ಮಾಹಿತಿಯನ್ನು ನೀಡಿದ ನಂತರ ದೃಢೀಕರಣ ಅರ್ಜಿಗೆ ಸಹಿ ಮಾಡಲು ಒಪ್ಪದೇ ಇದ್ದಲ್ಲಿ ಏನು ಮಾಡಬೇಕು?
ಮಉತ್ತರ: ಾಹಿತಿದಾರರು ಸಹಿ ಮಾಡಲು ಒಪ್ಪಿರುವುದಿಲ್ಲವೆಂದು ಸಮೀಕ್ಷೆದಾರರು ದೃಢೀಕರಿಸಿ Upload ಮಾಡುವುದು.
45. ಹೊರ ರಾಜ್ಯದವರು ಇಲ್ಲಿ ನೆಲೆಸಿ ಇಲ್ಲಿ ಪಡಿತರ ಚೀಟಿ/ ಆಧಾರ್ ಸಂಖ್ಯೆ ಹೊಂದಿದ್ದರೆ ಅವರನ್ನು ಸಮೀಕ್ಷೆಗೊಳಪಡಿಸಬಹುದೇ?
ಉತ್ತರ: ಕರ್ನಾಟಕ ರಾಜ್ಯದಲ್ಲಿ ನೋಂದಣಿಯಾಗಿರುವ ಆಧಾರ್ ವಿವರಗಳನ್ನು ಮಾತ್ರ ಉಪಯೋಗಿಸಲು ಅವಕಾಶವಿರುತ್ತದೆ.
46. ನಗರ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ಸರ್ವೇ ಮಾಡುವಾಗ ಕೆಲವು ಮನೆಗಳಲ್ಲಿ ಬೀಗ ಹಾಕಿರುವ ಸಂದರ್ಭಗಳಲ್ಲಿ ಏನು ಮಾಡಬೇಕು?
ಉತ್ತರ: ಪಕ್ಕದ ಮನೆಯ ಮಾಹಿತಿದಾರರಿಂದ ತಿಳಿದು, ಹತ್ತಿರದ ಮನೆಗಳಲ್ಲಿ ಸರ್ವೆ ಮಾಡಿ, ಆ ಮನೆಯವರ ಸಂಪರ್ಕ ಕೋರಬೇಕು.
47. ಸಮೀಕ್ಷೆಯ ವೇಳೆ ಯಾವುದಾದರೂ ತಾಂತ್ರಿಕ ತೊಂದರೆ ಬಂದರೆ ಏನು ಮಾಡುವುದು?
ಉತ್ತರ: ತಕ್ಷಣ ಜಿಲ್ಲೆ ಮಟ್ಟದ ಅಧಿಕಾರಿಗಳಿಗೆ ತಿಳಿಸಬೇಕು.
48. ಒಂದು ಮನೆಯಲ್ಲಿ ಪುನಃ ಪುನಃ ಸಮೀಕ್ಷೆ ಆಗದಂತೆ ಹೇಗೆ ಖಚಿತಪಡಿಸಿಕೊಳ್ಳಬಹುದು?
ಉತ್ತರ: ಆಪ್‌ನಲ್ಲಿ ಮನೆ ಸಂಖ್ಯೆ, UHID ಮೂಲಕ ಪರಿಶೀಲಿಸಿ ಮಾತ್ರ ಸಮೀಕ್ಷೆ ಮುಂದುವರಿಸಬೇಕು.
49. ಗಣತಿದಾರರಿಗೆ ನಿರಂತರ ತರಬೇತಿ ನೀಡಲಾಗುತ್ತದೆಯೇ?
ಉತ್ತರ: ಹೌದು, ಅಗತ್ಯವಿದ್ದಲ್ಲಿ ಮರು ತರಬೇತಿ ನೀಡಲಾಗುತ್ತದೆ.
50. ಸಮೀಕ್ಷೆ ಮುಗಿದ ನಂತರದ ಮುಂದಿನ ಹಂತಗಳು ಯಾವುವು?
ಉತ್ತರ: ಮಾಹಿತಿಯನ್ನು ಪರಿಶೀಲನೆ ಮಾಡಲಾಗುತ್ತದೆ, ನಂತರ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ.

You May Also Like 👇

Loading...
Post a Comment (0)
Previous Post Next Post