ಬೆರೆಯದೇ ಕರಗುವ ಆ ಸೊಬಗೇ ಚೆಂದ...

ಬೆರೆಯದೇ ಕರಗುವ ಆ ಸೊಬಗೇ ಚೆಂದ...egnana.co.in

ಬಾಳಲ್ಲಿ ಬಂದೆ ಹಸಿರೆಲೆಯಂತೆ ನೀನು 
ಆಸರೆಯ ಪಡೆದೆ ಇಬ್ಬನಿಯಂತೆ ನಾನು
ಜೊತೆಯಾಗಿ ಸಂಭ್ರಮಿಸುವ ಸಣ್ಣ ಬಯಕೆ ನನದು 
ಕೊನೆಯವರೆಗೂ ಬೆರೆಯದೇ ಕರಗುವ ಗುರಿ ಎನದು

ಬೆರೆಯದೇ ಕರಗುವ ಆ ಸೊಬಗೇ ಚೆಂದ 
ಬೆರೆತು ನೀರಾದರೆ ಹಾಳು ಆ ಅಂದ 
ಇಬ್ಬನಿಯ ಹೊತ್ತ ಎಲೆಯೆಂದೂ ವಿಶೇಷ 
ನೀರಿನಿಂದ ತೊಯ್ದ ಎಲೆಯೆಂದೆಂದೂ ಅವಶೇಷ 

ವಿಶೇಷವಾಗುವ ಅವಕಾಶ ಸಿಗಲೆಂಬ ಆಸೆ 
ಕೊಡು ನೀನು ಅನುಗಾಲ ಜೊತೆಯಾಗುವ ಭಾಷೆ.

- ಸತ್ಯಪ್ರೀಯ

Post a Comment (0)
Previous Post Next Post