ಜೀವನವೇ ನೀನೆಂದಿಗೂ ಪ್ರಶ್ನಾರ್ಥಕವೇಕೆ..?

ಜೀವನವೇ ನೀನೆಂದಿಗೂ ಪ್ರಶ್ನಾರ್ಥಕವೇಕೆ..? eGnana.co.in


ಭಾವಜೀವಿಯ ಬದುಕಲಿ ಏಕಾಂತವ ಮಾಡುವೆ 
ಅದಕ್ಕೆ ಕಾರಣವನ್ನು ಗೌಪ್ಯವಾಗಿಯೇ ಇಡುವೆ
ಚಿಂತನೆಗೆ ಒಳಪಡಿಸಿ ಅಂತರ್ಮುಖಿಯಾಗಿಸುವೆ
ಬಂಧಗಳ ಬಹಿಷ್ಕರಿಸಿ ಬೇಗುದಿಯಲಿ ಬೇಯಿಸುವೆ

ಒಳಿತು-ಕೆಡಕುಗಳ ತರ್ಕದಲಿ ತೋರಿಸುವೆ 
ಮನವನ್ನು ಅಭೇದ್ಯ ಗೊಂದಲದ ಗೂಡಾಗಿಸುವೆ
ಒಳಿತೆಂದು ಕಹಿಸತ್ಯ ಎಂಬುದನು ಸಾಧಿಸುವೆ 
ಕೆಡಕಿಗೆ ಸರ್ವರ ಮಿತೃತ್ವ ಕರುನಿಸುವೆ 

ಸ್ನೇಹಜೀವಿಯನ್ನು ಏಕಾಂತದ ಕೂಪಕ್ಕೆ ತಳ್ಳುವೆ
ಸಮಾಜವೆಂಬ ದಳ್ಳುರಿಯ ಸಂಕೋಲೆ ನಿರ್ಮಿಸಿ 
ಪ್ರತಿ ಆಯ್ಕೆಗೂ ನಿಂದನೆಯ ಬಹುಮಾನ ಇಟ್ಟಿರುವೆ 
ಯಾವುದು ಸರಿಯೆಂಬ ಪ್ರಶ್ನೆಯನು ಬಚ್ಚಿಡುವೆ.

- ಸತ್ಯಪ್ರೀಯ

ಇದನ್ನೂ ಓದಿ 👇

Loading...
Post a Comment (0)
Previous Post Next Post