ಕಲಿಕಾ ಚೇತರಿಕೆ: ಶಾಲಾ ಹಂತದ ಮತ್ತು ವಿವಿಧ ಹಂತದ ಅಧಿಕಾರಿಗಳ ಜವಾಬ್ದಾರಿಗಳು

ಇದು ರಾಜ್ಯ ಮಟ್ಟದ ಕಾರ್ಯಕ್ರಮವಾಗಿದ್ದು, ಶೈಕ್ಷಣಿಕ ವರ್ಷದ ಚಟುವಟಿಕೆಗಳನ್ನು ಮರುಹೊಂದಾಣಿಕೆ ಮಾಡಿಕೊಂಡಿರುವುದರಿಂದ ಅನುಷ್ಠಾನ ಹಾಗೂ ಅನುಪಾಲನೆಗಾಗಿ ಎಲ್ಲಾ ಹಂತದ ಭಾಗೀದಾರರು ತಮ್ಮ ಜವಾಬ್ದಾರಿಗಳನ್ನು ನಿಭಾಯಿಸಬೇಕಿದೆ.

ಕಲಿಕಾ ಚೇತರಿಕೆ ಕಾರ್ಯಕ್ರಮದ ಅನುಷ್ಠಾನದಲ್ಲಿ ಶಾಲಾ ಹಂತದ ಮತ್ತು ವಿವಿಧ ಹಂತದ ಅಧಿಕಾರಿಗಳ ಜವಾಬ್ದಾರಿಗಳು

ಉಪನಿರ್ದೇಶಕರು (ಅಭಿವೃದ್ಧಿ) ರವರ ಜವಾಬ್ದಾರಿಗಳು

 • ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಷ್ಠಾನ ಹಾಗೂ ಅನುಪಾಲನೆ ಮಾಡಲು ಡಯಟ್ ಹಂತದಲ್ಲಿರುವ ಒಬ್ಬ ಹಿರಿಯ ಉಪನ್ಯಾಸಕರನ್ನು ಕಲಿಕಾ ಚೇತರಿಕೆ ಕಾರ್ಯಕ್ರಮಕ್ಕೆ ನೋಡಲ್ ಅಧಿಕಾರಿಯಾಗಿ ನೇಮಿಸುವುದು. 
 • ಸಂಪನ್ಮೂಲ ಸಾಹಿತ್ಯದ ಬಳಕೆ ಹಾಗೂ ಕಾರ್ಯಕ್ರಮದ ಅನುಷ್ಠಾನ ಮಾಡಲು ವಿಷಯವಾರು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಿ ರಾಜ್ಯ ಹಂತಕ್ಕೆ ತರಬೇತಿಗಾಗಿ ನಿಯೋಜಿಸುವುದು.
 • ರಾಜ್ಯ ಹಂತದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳ ಸಹಾಯದೊಂದಿಗೆ ಜಿಲ್ಲಾ ಹಂತದಲ್ಲಿ ಕಲಿಕಾ ಚೇತರಿಕೆ - ಕಾರ್ಯಕ್ರಮದ ತರಬೇತಿಯನ್ನು ತಾಲ್ಲೂಕು ಸಂಪನ್ಮೂಲ ವ್ಯಕ್ತಿಗಳಿಗೆ ನೀಡುವುದು.
 • ಕಲಿಕಾ ಚೇತರಿಕ ಕಾರ್ಯಕ್ರಮದ ಮಾಹೇವಾರು ಪ್ರಗತಿ ಪರಿಶೀಲನೆ ಸಭೆಯನ್ನು ಉಪನಿರ್ದೇಶಕರು (ಆಡಳಿತ) ಇವರ ಸಮನ್ವಯದೊಂದಿಗೆ ನಡೆಸಿ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವುದು.
 • ಕಲಿಕೆಯನ್ನು ದೃಢೀಕರಿಸಲು ಕಾರ್ಯಕ್ರಮದ ಆರಂಭ, ಮಧ್ಯಂತರ, ಅಂತ್ಯದ ವೇಳೆಯಲ್ಲಿ ಆಳಶೋಧಾ ಅಧ್ಯಯನ ನಡೆಸುವುದು.
 • ಜಿಲ್ಲಾ ಪಂತದಲ್ಲಿ ಕಲಿಕ ಚೇತರಿಕೆ ಕಾರ್ಯಕ್ರಮದ ಉತ್ತಮ ಅಭ್ಯಾಸಗಳ ಹಂಚಿಕೆಗೆ ವೇದಿಕೆಯನ್ನು ಕಲ್ಪಿಸುವುದು (ವರ್ಷಕ್ಕೆ ಕನಿಷ್ಠ ಎರಡು ಬಾರಿ).
 • ಕಾಲ ಕಾಲಕ್ಕೆ ಕಾರ್ಯಕ್ರಮದ ಉತ್ತಮ ಅನುಷ್ಠಾನಕ್ಕೆ ಅಗತ್ಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು.

ಉಪನಿರ್ದೇಶಕರು (ಆಡಳಿತ) ರವರ ಜವಾಬ್ದಾರಿಗಳು

 • ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಅನುಸ್ಥಾನ ಹಾಗೂ ಅನುಪಾಲನೆ ಮಾಡಲು ವಿಷಯ ಪರಿವೀಕ್ಷಕರನ್ನು ವಿಷಯವಾರು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸುವುದು.
 • ಶಿಕ್ಷಣಾಧಿಕಾರಿಗಳು ಹಾಗೂ ಡಿ.ವೈ.ಪಿ.ಸಿ-1 ಮತ್ತು 2 ಹಾಗೂ ಎ.ಪಿ.ಸಿ.ಒ-1 ಮತ್ತು 2 ಇವರನ್ನು ಕಾರ್ಯಕ್ರಮದ ಅನುಷ್ಠಾನ ಹಾಗೂ ಅನುಪಾಲನೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಕ್ರಮ ವಹಿಸುವುದು.
 • ಡಯಟ್ ಹಂತದಲ್ಲಿ ನಡೆಯುವ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಂಡು ಶಾಲಾ ಹಂತದಲ್ಲಿ ತಾವು ಕಂಡ ಅನುಭವಗಳನ್ನು ಹಂಚಿಕೊಳ್ಳುವುದು.
 • ತರಬೇತಿಗೆ ಶಿಕ್ಷಕರನ್ನು ನಿಯೋಜಿಸಲು ಸಕಾಲದಲ್ಲಿ ಅಗತ್ಯ ಕ್ರಮವಹಿಸುವುದು. 
 • ತರಬೇತಿಯ ಪ್ರತಿಯನ್ನು ಕಾಲಕಾಲಕ್ಕೆ ಅನುಪಾಲನೆ ಮಾಡಿ ನಿಯೋಜಿತ ಶಿಕ್ಷಕರು ತರಬೇತಿಯಲ್ಲಿ ಭಾಗವಹಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳುವದು.
 • ಕಾಲ ಕಾಲಕ್ಕೆ ಕಾರ್ಯಕ್ರಮದ ಉತ್ತಮ ಅನುಷ್ಠಾನಕ್ಕೆ ಅಗತ್ಯ ಸಹಾಯ ಮತ್ತು ಬೆಂಬಲವನ್ನು ಒದಗಿಸುವುದು.

ತಾಲ್ಲೂಕು ಹಂತದ ಜವಾಬ್ದಾರಿಗಳು

 • ಕಲಿಕಾ ಚೇತರಿಕೆ ಕಾರ್ಯಕ್ರಮದ ಹಿನ್ನೆಲೆ, ಸಂಪನ್ಮೂಲಗಳ ಪರಿಚಯ ಮತ್ತು ಅನುಷ್ಠಾನದ ಕುರಿತು ಅನುಷ್ಠಾನ ಅಧಿಕಾರಿಗಳಿಗೆ ತರಬೇತಿಯನ್ನು ನೀಡುವರು. ( ಬಿ.ಆರ್.ಪಿ, ಇ.ಸಿ.ಒ., ಸಿ.ಆರ್.ಪಿ., ಬಿ.ಐ.ಇ.ಆರ್.ಟಿ.).
 • ಜಿಲ್ಲಾ ಹಂತದಲ್ಲಿ ನಡೆಯುವ ಸಂಪನ್ಮೂಲ ವ್ಯಕ್ತಿಗಳ ತರಬೇತಿಗೆ ಸೂಕ್ತ ವ್ಯಕ್ತಿಗಳನ್ನು (ಶಿಕ್ಷಕರು ಅಥವಾ ಅನುಷ್ಠಾನಾಧಿಕಾರಿಗಳು) ಗುರುತಿಸಿ ನಿಯೋಚಿಸುವುದು. 
 • ಜಿಲ್ಲಾ ಹಂತದಲ್ಲಿ ತರಬೇತಿ ಪಡೆದ ಸಂಪನ್ಮೂಲ ವ್ಯಕ್ತಿಗಳಿಂದ ತನ್ನ ವ್ಯಾಪ್ತಿ ಶಿಕ್ಷಕರಿಗೆ ತರಬೇತಿಯನ್ನು ಆಯೋಚಿಸುವುದು.
 • ಪ್ರತಿ ತಿಂಗಳು ಸಮೂಹ ಸಂಪನ್ಮೂಲ ಸಭೆಗಳನ್ನು ( ಕ್ಲಸ್ಟರ್ ಸಮಾಲೋಚನ ಸಭೆ ) ಆಯೋಜಿಸಿ ಕಲಿಕಾ ಚತರಿಕೆ ಕಾರ್ಯಕ್ರಮದ ಪ್ರಗತಿ ಮತ್ತು ಅನುಭವ ಹಂಚಿಕೆಗೆ ಅವಕಾಶ ನೀಡುವುದು ಹಾಗೂ ಉತ್ತರ ಅಭ್ಯಾಗಳ ಬಗ್ಗೆ ವಿವರವಾದ ವರದಿಯನ್ನು ಸಂಬಂಧಿಸಿದ ಡಯಟ್‌ಗೆ ಸಲ್ಲಿಸುವುದು.
 • ಪ್ರಸ್ತುತ ಸ್ಥಿತಿಗತಿಗಳನ್ನು ಅವಲೋಕಿಸಿ ಸೂಕ್ತ ಹಿಮ್ಮಾಹಿತಿಯನ್ನು ಶಾಲಾ ಹಂತಕ್ಕೆ ಒದಗಿಸುವುದು
 • ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ನೇತೃತ್ವದಲ್ಲಿ ಕಾಲಕಾಲಕ್ಕೆ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಕಾರ್ಯಕ್ರಮದ ಅನುಪಾಲನೆ ಮಾಡುವುದು. 
 • ರಾಜ್ಯ ದಂತದಿಂದ ವಿತರಣೆಯಾಗುವ ಸಂಪನ್ಮೂಲ ಸಾಹಿತ್ಯಗಳು ಪ್ರತಿ ಶಾಲೆಗೆ ತಲುಪಿರುವ ಬಗ್ಗೆ ದೃಢೀಕರಣ ಮಾಡಿಕೊಳ್ಳುವುದು ಹಾಗೂ ಅವುಗಳ ಬಳಕೆಯ ಬಗ್ಗೆ ಅನುಪಾಲನೆ ಮಾಡುವುದು.

ಶಾಲಾ ಹಂತದ ಜವಾಬ್ದಾರಿಗಳು

 • ಶಾಲೆಯ ಎಲ್ಲಾ ಭಾಗೀದಾರರಿಗೆ ಕಲಿಕಾ ಚೇತರಿಕ ಕಾರ್ಯಕ್ರಮದ ಮಹತ್ವದ ಕುರಿತು ಅರಿವು ಮೂಡಿಸುವುದು. (ಜೋಷಕರು, ಎಸ್.ಡಿ.ಎಂ.ಸಿ. ಸದಸ್ಯರು, ಸ್ಥಳೀಯ ಜನ ಪ್ರತಿನಿಧಿಗಳು).
 • ಕಾರ್ಯಕ್ರಮ ಹಾಗೂ ಸಂಪನ್ಮೂಲಗಳ ಪರಿಚಯಕ್ಕಾಗಿ ಆಯೋಜಿಸಿದ ತರಬೇತಿಯಲ್ಲಿ ಎಲ್ಲಾ ಶಿಕ್ಷಕರು ಕಡ್ಡಾಯವಾಗಿ ಭಾಗವಹಿಸುವುದು.
 • ಕಲಿಕಾ ಚೇತರಿಕೆಗಾಗಿ ನೀಡಿದ ಸಂಪನ್ಮೂಲಗಳನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿ ವಿದ್ಯಾರ್ಥಿಗಳ ಕಲಿಕೆಯನ್ನು ದೃಢೀಕರಿಸುವುದು ಹಾಗೂ ಪ್ರತಿವಾರ ಶೈಕ್ಷಣಿಕ ಪ್ರಗತಿ ಪರಿಶೀಲನಾ ಸಭೆಯನ್ನು ಶಾಲಾ ಮಟ್ಟದಲ್ಲಿ ಹಮ್ಮಿಕೊಳ್ಳುವುದು. 
 • ನೀಡಲಾದ ಸಂಪನ್ಮೂಲಗಳ ಹೊರತಾಗಿ ಕಲಿಕಾ ಚೇತರಿಕೆಗೆ ಅಗತ್ಯವಿರುವ ಇತರೆ ಸಂಪನ್ಮೂಲಗಳನ್ನು ಹೊಂದಿಸಿಕೊಳ್ಳುವದು.
 • ಮೇಲಿನ ಎಲ್ಲಾ ಅಂಶಗಳನ್ನು ಮನನ ಮಾಡಿಕೊಂಡು ಎಲ್ಲಾ ಹಂತದ ಅಧಿಕಾರಿಗಳು, ಅನುಷ್ಠಾನಾಧಿಕಾರಿಗಳು ಹಾಗೂ ಶಿಕ್ಷಕರು ಕಾರ್ಯಕ್ರಮದ ಆಶಯವನ್ನು ಈಡೇರಿಸುವುದು.
Post a Comment (0)
Previous Post Next Post